ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಬೆಂಗಳೂರಿಗರೇ ಎಚ್ಚರ.. ರಾಜಕಾಲುವೆ ಅಕ್ರಮ ಒತ್ತುವರಿ ತೆರವಿಗೆ ಮುಹೂರ್ತ ಫಿಕ್ಸ್; ಮತ್ತೆ ಘರ್ಜಿಸಲಿವೆ ಬುಲ್ಡೋಜರ್ ಗಳು!

ಬೆಂಗಳೂರು: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಇದೀಗ ಮಳೆ ಕಡಿಮೆಯಾಗಿದೆಯಾದರೂ ನಗರ ನಿವಾಸಿಗಳ ಟೆನ್ಷನ್ ಮಾತ್ರ ಇನ್ನೂ ನಿಂತಿಲ್ಲ. ಈ ನಡುವೆ ಮತ್ತೆ ನಗರದಲ್ಲಿ ಬಿಬಿಎಂಪಿ ಅಕ್ರಮ ಒತ್ತುವರಿ ತೆರವಿಗೆ ಮುಂದಾಗಿದೆ.

ಹೌದು… ಬೃಹತ್‌ ಬೆಂಗಳೂರು ಪಾಲಿಕೆ ವ್ಯಾಪ್ತಿಯ ರಾಜಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿದ ಕಟ್ಟಡ ಮಾಲೀಕರಿಗೆ (Rajakaluve Encroachment) ಅಧಿಕಾರಿಗಳು ಶೀಘ್ರವೇ ಶಾಕ್ ಕೊಡಲಿದ್ದಾರೆ. ಕಳೆದ ವಾರ ಸುರಿದ ಭಾರಿ ಮಳೆಗೆ ರಾಜಕಾಲುವೆಗಳ ನೀರು ರಸ್ತೆಗೆ ಹರಿದಿತ್ತು.

ಇದರಿಂದ ಸರ್ಕಾರ ಹಾಗೂ ಬಿಬಿಎಂಪಿ ತೀವ್ರ ಮುಜುಗರಕ್ಕೆ ತುತ್ತಾಗಿತ್ತು. ಇತ್ತ ಖುದ್ದು ಡಿಸಿಎಂ ಶಿವಕುಮಾರ್‌ ಕೂಡ ಅಕ್ರಮ ಒತ್ತುವರಿ ತೆರವಿಗೆ ಆದೇಶ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜಕಾಲುವೆ, ಕೆರೆ ಒತ್ತುವರಿ ಮಾಡಿದ ಕಟ್ಟಡ ಮಾಲೀಕರಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಮುಂದಾಗಿದೆ. ಶೀಘ್ರದಲ್ಲೇ ಅಕ್ರಮ ಒತ್ತುವರಿ ಕಾರ್ಯಾಚರಣೆಗೆ ಮುಂದಾಗಲಿದೆ.

1700ಕ್ಕೂ ಅಧಿಕ ಅಕ್ರಮ ಕಟ್ಟಡ

ಈಗಾಗಲೇ 1,712 ಕಟ್ಟಡಗಳು ರಾಜಕಾಲುವೆ ಒತ್ತುವರಿ ಮಾಡಿರುವ ವರದಿ ಸಿದ್ದವಾಗಿದೆ. ಅದರಲ್ಲಿ 196 ಕಟ್ಟಡಗಳ ಕೇಸ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇದೆ. ಉಳಿದಂತೆ 167 ಕಟ್ಟಡಗಳ ಸರ್ವೆ ಕಾರ್ಯ ಮುಗಿದಿದೆ. ತಹಸೀಲ್ದಾರರು ಆದೇಶ ನೀಡಿದ್ರೆ ಒತ್ತುವರಿ ತೆರವಿಗೆ ಬಿಬಿಎಂಪಿ ಮುಂದಾಗಲಿದೆ.

ಸದ್ಯ 1712 ಒತ್ತುವರಿ ಪ್ರಕರಣಗಳಲ್ಲಿ 300 ಕಡೆ ಖಾಲಿ ನಿವೇಶನ ಇದ್ದು, ಈಗಾಗಲೇ ಒತ್ತುವರಿ ತೆರವು ಮಾಡಲಾಗಿದೆ. ಉಳಿದ 800 ಕಡೆ ಒತ್ತುವರಿ ತೆರವು ಬಾಕಿ ಇದೆ. ಯಾವ್ಯಾವ ವಲಯಗಳಲ್ಲಿ ಒತ್ತುವರಿ ಆಗಿದೆ ಎಂದು ನೋಡುವುದಾದರೆ, ಪೂರ್ವ ವಲಯದಲ್ಲಿ 123, ಪಶ್ಚಿಮ 46, ದಕ್ಷಿಣ 46, ಕೋರಮಂಗಲದಲ್ಲಿ 104, ಹಾಗೂ ಯಲಹಂಕ 359, ಮಹಾದೇವಪುರ 492, ಬೊಮ್ಮನಹಳ್ಳಿ 201, ಆರ್ ಆರ್ ನಗರ 104 ಸೇರಿದಂತೆ ದಾಸರಹಳ್ಳಿಯಲ್ಲಿ 207 ವಿವಾದಿತ ಕಟ್ಟಡಗಳಿವೆ ಎಂದು ಹೇಳಲಾಗಿದೆ.

No Comments

Leave A Comment