ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಮಂಗಳೂರು: “ಸಹಕರಿಸು, ಇಲ್ಲ 24 ತುಂಡು ಮಾಡುವೆ”, ಬೆದರಿಕೆ ನೊಂದು ಯುವತಿ ಆತ್ಮಹತ್ಯೆಗೆ ಯತ್ನ
ಮಂಗಳೂರು, ಅಕ್ಟೋಬರ್ 25: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಸುರತ್ಕಲ್ನಲ್ಲಿ ವಾಸವಾಗಿರುವ ಓರ್ವ ಯುವಕನಿಗೆ ಬೆದರಿಕೆ ಸಂದೇಶ ಬಂದಿದೆ. “ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಅಂತ ಯುವಕನಿಗೆ ಬೆದರಿಕೆ ಸಂದೇಶ ಬಂದಿದೆ. ಮುಸ್ಲಿಂ ಸಮಾಜದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.
ಆರೋಪಿ ಯುವತಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿದ್ದಾನೆ. ಬಳಿಕ ಯುವತಿಯ ಫೇಸ್ಬುಕ್ ಖಾತೆ ಮುಖಾಂತರ ಆಕೆಯ ಅಣ್ಣನಿಗೆ “ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ’ ಎಂದು ಸಂದೇಶ ಕಳಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇನ್ನು, ಬೆದರಿಕೆ ಹಾಕಿದ ಆರೋಪಿ ಸೂರತ್ಕಲ್ನವನೇ ಎಂದು ಯುವತಿ ಹೇಳಿದ್ದಾಳೆ.
ಯುವತಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಅದರ ಮೂಲಕ ಆಕೆಯ ಸಹೋದರನಿಗೆ ಬೆದರಿಕೆ ಸಂದೇಶ ಮತ್ತು ಯುವತಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಪೊಲೀಸರು ಸದಾಶಿವನಗರದ ಶಾರಿಕ್ ನೂರ್ಜಹಾನ್ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಶಕ್ಕೆ ಪಡೆದು ವಿಚಾರಣೆ ವೇಳೆ ಆರೋಪಿ ವಿರುದ್ಧ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ.
ಯುವತಿ ಆತ್ಮಹತ್ಯೆಗೆ ಯತ್ನ
ಈ ಬಳಿಕವೂ ಆರೋಪಿ ಯುವತಿಯ ಸಹೋದರಿನಿಗೆ ನಿರಂತರ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಡೆತ್ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಡೆತ್ನೋಟ್ನಲ್ಲಿ “ಇಡ್ಯಾ ಸಮುದಾಯದ ಯುವಕ ಕಿರುಕುಳ ನೀಡುತ್ತಿದ್ದಾನೆ. ಪೊಲೀಸರಿಂದಲೂ ಯಾವುದೇ ನ್ಯಾಯ ಸಿಕ್ಕಿಲ್ಲ. ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರ ಆಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನೂ ಬಿಡಬಾರದು” ಎಂದು ಡೆತ್ನೋಟ್ ಬರೆದಿದ್ದಾಳೆ.
ಆತ್ಮಹತ್ಯಗೆ ಯತ್ನಿಸಿದ ಯುವತಿಯ ಗೆಳತಿ ಡೀನಾ ಮಾತನಾಡಿ, “ನನ್ನ ಸ್ನೇಹಿತೆ ಮಾರ್ಚ್ನಲ್ಲಿ ಜನರಲ್ ಸ್ಟೋರ್ ತೆರಳಿದ್ದಳು. ಈಕೆಯ ಅಂಗಡಿ ಮುಂದೆನೇ ಆರೋಪಿಯ ಮನೆ ಇದೆ. ಯುವಕನ ಮನೆಯವರು ಅಂಗಡಿಗೆ ಬರ್ತಿದ್ದರು. ಯುವಕನ ತಾಯಿ ನೂರ್ ಜಹಾನ್ ಹಾಗೂ ಹುಡುಗಿಯ ತಾಯಿ ಕ್ಲೋಸ್ ಆಗಿದ್ದರು. ಆರೋಪಿ ತಾಯಿ ಒಂದು ದಿನ ಬಂದು ನಿಮ್ಮ ಮಗಳು ಚಂದ ಇದ್ದಾಳೆ, ನಮ್ಮ ಮಗನಿಗೆ ಕೊಟ್ಟು ಮದುವೆ ಮಾಡಿ ಅಂದರು. ಹುಡುಗಿಯ ತಾಯಿ ಕೂಡ ಆ ಕೂಡಲೇ ಬೈದಿದ್ದಾರೆ” ಎಂದು ತಿಳಿಸಿದರು.
ಆರೋಪಿ ಅತ್ಯಾಚರ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದ: ಯುವತಿ ಗೆಳತಿ ಡೀನಾ
ಅಂಗಡಿಯ ಗೂಗಲ್ ಪೇ ನಂಬರ್ ತಗೊಂಡು ಅದರಿಂದಲೇ ಮೆಸೇಜ್ ಮಾಡುತ್ತಿದ್ದನು. ಗೂಗಲ್ ಪೇನಲ್ಲಿ ಅವನ ನಂಬರ್ ಬ್ಲಾಕ್ ಮಾಡಿದ್ದಳು. ಇನ್ಸ್ಟಾಗ್ರಾಂನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದನು. ನನ್ನ ಗೆಳತಿ ನಂಬರ್, ಬ್ಯಾಂಕ್ ಅಕೌಂಟ್ ಚೇಂಜ್ ಮಾಡುವುದಾಗಿ ಹೇಳಿದ್ದಳು. ಒಂದು ದಿನ ಆರೋಪಿಯ ತಂಗಿ ಬಂದು ಈಕೆಯ ಮೊಬೈಲ್ನ್ನು ಅವರ ಮನೆಗೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ಏನು ಪಾಸ್ವರ್ಡ್ ಬದಲಾಯಿಸಿದ್ದಾ ಗೊತ್ತಿಲ್ಲ. ಫೇಸ್ಬುಕ್ ಆಕೌಂಟ್ ಮತ್ತೆ ಓಪನ್ ಮಾಡಿದ್ದಾನೆ. ನನ್ನ ಗೆಳತಿಯ ಅಣ್ಣ, ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾನೆ. ಆಕೆಯ ಮೇಲೆ ರೇಪ್ ಮಾಡುತ್ತೇನೆ, 24 ತುಂಡು ಮಾಡುತ್ತೇನೆ ಎಂದು ಹೇಳಿದ್ದಾನೆ ಎಂದು ತಿಳಿಸಿದ್ದಾರೆ.
ಪೊಲೀಸರು ಒಂದು ವಾರದ ಒಳಗೆ ಆರೋಪಿ ಪತ್ತೆ ಬಗ್ಗೆ ಭರವಸೆ ನೀಡಿದ್ದರು. ಶಾರೀಖ್ನನ್ನು 24 ಗಂಟೆ ವಿಚಾರಣೆ ಮಾಡಿದ್ದಾರೆ. ಬಳಿಕ ಹೊರಗೆ ಬಂದಿದ್ದಾನೆ. ಅಂಗಡಿಯ ಸುತ್ತ ಸುತ್ತಿದ್ದಾನೆ. ಗುರುವಾರ ರಾತ್ರಿ ಮತ್ತೆ ಯುವತಿ ಅಣ್ಣನಿಗೆ ಸಂದೇಶ ಕಳಸಿದ್ದಾನೆ. ಎಷ್ಟು ಸಾರಿ ನನ್ನನ್ನು ಜೈಲಿಗೆ ಕಳುಹಿಸಿದರು ಸಹ ಹೊರಗೆ ಬರುತ್ತೇನೆ ಅಂತ ಹೇಳಿದ್ದಾನೆ. ಇವತ್ತಿನಿಂದ ಗೇಮ್ ಸ್ಟಾರ್ಟ್ ಎಂದು ಹೇಳಿದ್ದಾನೆ ಎಂದು ಹೇಳಿದ್ದಾರೆ.
ನನ್ನ ಗೆಳತಿ ಡೆತ್ ನೋಟ್ ಬರೆದು ಮಾತ್ರೆ ನುಂಗಿದ್ದಾಳೆ. ನನಗೇನಾದರು ಆದ್ರೆ ಹುಡುಗನನ್ನು ಮತ್ತು ಅವನ ತಾಯಿಯನ್ನು ಬಿಡಬಾರದು ಎಂದು ಹೇಳಿದ್ದಾಳೆ. ಪೊಲೀಸರು ಅವನನ್ನು ವಿಚಾರಣೆ ಮಾಡಿ ಹೊರಗೆ ಬಿಟ್ಟಿರುವುದು ಅವಳಿಗೆ ಟೆನ್ಶನ್ ಆಗಿದೆ. ಆರೋಪಿ ಹೊರಗೆ ಬಂದ ಬಳಿಕ ಯುವಕನ ತಾಯಿ ಇವಳನ್ನು ನೋಡಿ ಜೋರು ನಗುತ್ತಿದ್ದಳಂತೆ. ನಿನ್ನೆ ಮೆಸೇಜ್ ಬಂದ ಬಳಿಕ ಅವನೇ ಅಂತ ಖಚಿತವಾಗಿದೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ಮಾತ್ರೆ ತಗೆದುಕೊಂಡಿದ್ದಾಳೆ ಎಂದರು.