ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಕನ್ನಡ ನಾಮಫಲಕ ಕಡ್ದಾಯಕ್ಕೆ ಒತ್ತಾಯ

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಜಿಲ್ಲೆಯ ಸರ್ವ ಸದಸ್ಯರಿಂದ 60% ಕನ್ನಡ ನಾಮಫಲಕ ಕಡ್ಡಾಯ ಕುರಿತು ಉಡುಪಿ ಜಿಲ್ಲಾಧಿಕಾರಿಗೆ ಮನವಿ.

ದಿನಾಂಕ -14/10/2024 ರಂದು ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲಾದ್ಯಂತ ಜಾಹಿರಾತು ಫಲಕಗಳು, ಶಿಕ್ಷಣ ಸಂಸ್ಥೆಗಳ ಫಲಕಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆಯ ಜಾಹಿರಾತು ಫಲಕಗಳು ಸೇರಿದಂತೆ ಎಲ್ಲಾ ಕಡೆ ಸರ್ಕಾರದ ನಿಯಮದ ನಾಮಫಲಕಗಳನ್ನು ಅಳವಡಿಸಿಕೊಳ್ಳದೇ. ಮನಬಂದಂತೆ ಪರಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಷಯದ ದ ಬಗ್ಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024 ರನ್ವಯ ಉಡುಪಿ ಕರ್ನಾಟಕ ರಾಜ್ಯ ವ್ಯಾಪ್ತಿ ಪರವಾನಿಗೆ ಪಡೆದು ನಡೆಸುವ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಎಲ್ಲಾ ರೀತಿಯ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ನಾಮಫಲಕದಲ್ಲಿ ಶೇ. 60% ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಡಿಸೆಂಬರ್ 29, 2023 ರಂದು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ಹತ್ತು ತಿಂಗಳು ಕಳೆದರೂ ಸಹ ಉಡುಪಿ ಜಿಲ್ಲೆಯಲ್ಲಿ ಸುಗ್ರಿವಾಜ್ಞೆ ಸಮರ್ಪಕವಾಗಿ ಜಾರಿಗೆ ಆಗುತ್ತಿಲ್ಲ. ಇದನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ, ಉಡುಪಿ ಜಿಲ್ಲಾ ಘಟಕವು ಅನೇಕ ರೀತಿಯಿಂದ ಪ್ರತಿಭಟನೆಗಳನ್ನು ನಡೆಸಿದೆ. ಇಷ್ಟಾದರೂ ಸಹ ಜಿಲ್ಲಾಡಳಿತವಾಗಲೀ, ನಗರಸಭೆ ಆಡಳಿತವಾಗಲೀ ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಕಾರ

ಮುಂದಿನ ನವಂಬರ್ ಒಂದರ ಒಳಗೆ….ಅಂದರೆ ಕನ್ನಡ ನಾಡ ಹಬ್ಬದ …ರಾಜ್ಯೋತ್ಸವದ ವೇಳೆಗೆ ……..ಎಲ್ಲಾ ವಾಣಿಜ್ಯ ಮಳಿಗೆಗಳ, ಅಂಗಡಿ. ಮುಗ್ಗಟ್ಟು ನಾಮಫಲಕಗಳು ಸಂಪೂರ್ಣವಾಗಿ ಶೇಕಡ 60 ರಿಂದ 70 ಭಾಗ ವಿಳಾಸ ಸಮೇತ ಕನ್ನಡದಲ್ಲಿ ಇರಬೇಕು ಇಲ್ಲದಿದ್ದರೆ ಕನ್ನಡ ಅಭಿಮಾನಿಗಳಿಂದ ಕನ್ನಡ ಭಕ್ತರಿಂದ.. ಕಪ್ಪು ಮಸಿ. ಹಲವಾರು ರೀತಿ, ಕನ್ನಡ ಕರಸೇವಕರು. ಕರ ಸೇವಕರಿಂದ. ಈ ಮೇಲೆ ಕಾಣಿಸಿರುವ ದೃಶ್ಯಗಳು ಮುಂದುವರಿಯುತ್ತದೆ…. ಹೇಳಿ ಎಚ್ಚರಗೊಳ್ಳಿ ಎಚ್ಚರಗೊಳ್ಳಿ…. ಕನ್ನಡ ನಾಮ ಫಲಕಗಳು ಅಗ್ರಸ್ಥಾನದಲ್ಲಿ ಬರೆಯಿಸಲು.. ಸಿದ್ದ ಮಾಡಿಕೊಳ್ಳಿ ಸಿದ್ದ ಮಾಡಿಕೊಳ್ಳಿ….
ಆದ್ದರಿಂದ ದಿನಾಂಕ: 14-10-2024 ರಂದು ಕರ್ನಾಟಕ ರಕ್ಷಣಾ ವೇದಿಕೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಧ್ಯಾಹ್ನ 4-30 ಗಂಟೆಗೆ ತಮ್ಮ ಕಛೇರಿಯಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಜಿಲ್ಲಾ ಸರ್ವ ಸದಸ್ಯರುಗಳು ಜಿಲ್ಲಾಧಿಕಾರಿಯಾವರಿ ಗೆ ಡಾ. ಕೆ.ವಿದ್ಯಾ ಕುಮಾರಿಯವರಿಗೆ ಮನವಿಯನ್ನು ನೀಡಲಾಯಿತು . ಈ ಮನವಿಗೆ ಯಾವುದೇ ಒಂದು ಕ್ರಮವನ್ನು ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಗುವುದು. ಈ ವಿಷಯವನ್ನು ತಮ್ಮ ಅವಗಾಹನೆಗೆ ತರುತ್ತಿದ್ದೇವೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ. ಗೌರವಾಧ್ಯಕ್ಷರಾದ ಸುಂದರ. ಎ.ಬಂಗೇರ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಜ್ಯೋತಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಗೋಪಾಲ್ ದೊರೆ, ಜಿಲ್ಲಾ ಸಂಸ್ಕೃತ ಕಾರ್ಯದರ್ಶಿ ಕೃಷ್ಣಕುಮಾರ್. ಬ್ರಹ್ಮವರ ತಾಲೂಕು ಅಧ್ಯಕ್ಷರಾದ ಸ್ಟ್ಯಾನಿ ಜಾರ್ಜ್ ಡಿಸೋಜ. ಹಾಗೂ ಜಿಲ್ಲಾ ಸದಸ್ಯರಾದ ರೇಣುಕಾ. ರಶ್ಮಿ. ಅಶೋಕ. ದೇವರಾಜ್. ರವಿಕುಮಾರ್. ವಿನೋದ್ ಕುಮಾರ್. ಶರಣು ಕುಮಾರ್. ಮೈಬೂಬ್. ರಮೇಶ. ವೈಭವ. ಉಪಸ್ಥಿತರಿದ್ದರು.

No Comments

Leave A Comment