ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿರುವ ದರ್ಶನ್ ಗೆ ಮತ್ತೊಂದು ಸಂಕಷ್ಟ; ಹಳೇಯ ಕೇಸಿಗೆ ಮರುಜೀವ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆದರಿಕೆ ವಿಚಾರವಾಗಿ ನಿರ್ಮಾಪಕ ದಾಖಲಿಸಿದ್ದ ಕೇಸ್ ಮರುಜೀವ ಪಡೆದುಕೊಂಡಿದೆ.

ಈ ಹಿಂದೆ `ಭಗವಾನ್ ಶ್ರೀ ಕೃಷ್ಣಾ’ ಎಂಬ ಭರತ್ ನಿರ್ಮಾಣದ ಸಿನಿಮಾದಲ್ಲಿ ಧೃವನ್ ನಾಯಕನಾಗಿ ನಟಿಸುತ್ತಿದ್ದ. 2020ರಲ್ಲಿ ನಿರ್ಮಾಪಕ ಭರತ್ ಸಿನಿಮಾದ ಶೂಟಿಂಗ್ ಶುರು ಮಾಡಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ಸಿನಿಮಾ ನಿಂತುಹೋಗಿತ್ತು. ಈ ವಿಚಾರವಾಗಿ ನಟ ಧೃವನ್, ದರ್ಶನ್ ಬಳಿ ಹೋಗಿದ್ದ. ಈ ವೇಳೆ ದರ್ಶನ್‌ನಿಂದ ಭರತ್‌ಗೆ ಕರೆ ಮಾಡಿಸಿದ್ದ. ಆಗ ದರ್ಶನ್ `ನೀನೆ ಇರೋದಿಲ್ಲ’ ಎಂದು ಭರತ್‌ಗೆ ಬೆದರಿಕೆ ಹಾಕಿದ್ದರು.

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಸಿನಿಮಾ ವಿಚಾರವಾಗಿ ಧೃವನ್, ನಟ ದರ್ಶನ್ ಬಳಿ ಹೋಗಿ ಬೆದರಿಕೆ ಹಾಕಿಸಿದ್ದಾನೆ ಎಂದು ನಿರ್ಮಾಪಕ ಭರತ್ ದೂರು ದಾಖಲಿಸಿದ್ದರು. 2022ರ ಆ.5 ರಂದು ಧೃವನ್ ಮೇಲೆ ಎನ್‌ಸಿಆರ್ ದಾಖಲಾಗಿತ್ತು. ಆ ವೇಳೆ ಬೆದರಿಕೆ ಹಾಕಿದ್ದ ವಿಚಾರವಾಗಿ ದರ್ಶನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ದರ್ಶನ್ ಮತ್ತು ಧೃವನ್ ಮೇಲೆ ಕೆಂಗೇರಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗೂ ನೋಟಿಸ್ ಕೂಡ ನೀಡಿರಲಿಲ್ಲ. ಇದೀಗ ಬೆದರಿಕೆ ಕೇಸ್ ಅಡಿಯಲ್ಲಿ ಆರೋಪಿ ಧೃವನ್ ಅಲಿಯಾಸ್ ಸೂರಜ್ ಕುಮಾರ್, ನಟ ದರ್ಶನ್, ದರ್ಶನ್ ಮ್ಯಾನೇಜರ್ ನಾಗರಾಜ್ ವಿರುದ್ಧ ಮತ್ತೆ ಎನ್‌ಸಿಆರ್ ದಾಖಲಾಗಿದೆ.

No Comments

Leave A Comment