ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಕರ್ನಾಟಕದಲ್ಲಿ ಮತ್ತೆ ಹೆಚ್ಚಲಿದೆ ವರುಣಾರ್ಭಟ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು, ಅಕ್ಟೋಬರ್ 17: ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ನಾನಾ ಅವಾಂತರಗಳು ಸಂಭವಿಸಿವೆ. ಇಷ್ಟು ದಿನ ಕಾಣಿಯಾಗಿದ್ದ ಸೂರ್ಯದೇವ ಇಂದು ಆಚೆ ಬಂದಿದ್ದಾನೆ. ಆದರೆ ಮಳೆ ಹೊಡೆತಕ್ಕೆ ಸಿಲುಕಿ ಅದರಿಂದ ಸಹಜ ಸ್ಥಿತಿಯತ್ತ ಮರಳುತ್ತಿರುವಾಗಲೇ ಬೆಂಗಳೂರಿಗೆ ಮತ್ತೆ ವರುಣನ ಎಚ್ಚರಿಕೆ ಕೊಟ್ಟಿದೆ. ಅಕ್ಟೋಬರ್ 21ರವರೆಗೆ ನಗರದಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ರಾಜ್ಯ ಹವಾಮಾನ ಇಲಾಖೆಯ ತಜ್ಞ ಸಿ.ಎಸ್.ಪಾಟೀಲ್, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಅ.21ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಧಾರವಾಡ ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ 7 ಜಿಲ್ಲೆಗಳಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅ.19ರವರೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ಇಂದು ವ್ಯಾಪಕ ಮಳೆಯಾಗಿದೆ.
ಮಂಗಳೂರು, ಹಾವೇರಿ, ತುಮಕೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ದಾವಣಗೆರೆಯಲ್ಲಿ 9 ಸೆಂ.ಮೀ ಮಳೆಯಾಗಿದೆ. ನಿನ್ನೆಯಿದ್ದ ವಾಯುಭಾರ ಕುಸಿತ ಇಂದು ದುರ್ಬಲವಾಗಿದೆ. ಗಾಳಿಯ ಪರಿಚಲನೆ ಆಂಧ್ರದ ಕರಾವಳಿಯಲ್ಲಿ 5.8 ಕಿ.ಮೀ ಎತ್ತರದಲ್ಲಿದೆ ಎಂದು ತಿಳಿಸಿದ್ದಾರೆ.
ಧಾರಾಕಾರ ಸುರಿದ ಮಳೆಗೆ ಬೆಂಗಳೂರಿನ ಮಾನ್ಯತಾ ಟೆಕ್ಪಾರ್ಕ್ನಲ್ಲಿ ಮಳೆ ನೀರು ಜಲಪಾತದಂತೆ ಧುಮ್ಮಿಕ್ಕಿದೆ. L&T ಕಂಪನಿ ನಡೆಸುತ್ತಿರುವ ಕಾಮಗಾರಿ ಜಾಗದಲ್ಲಿ, ಶೆಡ್, ಮರ ನೆಲಸಮ ಕಣ್ಣ ಮುಂದೆಯೇ ನೆಲಸಮವಾಗಿವೆ. ಹಿಂಗಾರು ಮಳೆಗೆ ನಾರ್ತ್ ವುಡ್ ವಿಲ್ಲಾ ಕೆರೆಯ ಅಂಗಳದಂತಾಗಿತ್ತು. ರಾಜಕಾಲುವೆಯ ನೀರು ವಿಲ್ಲಾಗಳಿಗೆ ನುಗ್ಗಿತ್ತು. ಕುಡಿಯೋದಕ್ಕೆ ನೀರಿಲ್ಲದೇ, ಕರೆಂಟ್ ಕೂಡ ಇಲ್ಲದೆ ಕೋಟಿ ಕುಳಗಳು ಪರದಾಡಿದ್ದರು.