ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಸಾದ್ ರಾಜ್ ಕಾಂಚನ್ ಗೆಲುವು ಖಚಿತವೆ೦ದರಿತ ದುಷ್ಟ ಶಕ್ತಿಗಳಿಂದ ಅವರ ತೇಜೋವದೆಗೆ ಯತ್ನ:ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಇತ್ತೀಚಿಗೆ ಉಚ್ಚಿಲದಲ್ಲಿ ನಡೆದ ಮಹಾಲಕ್ಷ್ಮಿ ದೇವಸ್ಥಾನದ ಉತ್ಸವ ಸಮಿತಿಯವರು ಉರ್ದು ಭಾಷೆ ಪರಿಣಿತ ಮುಸ್ಲಿಂ ಸಮುದಾಯದವರಿಗೆ ಸನ್ಮಾನ ಮಾಡಿರುವುದರ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷದ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಸನ್ಮಾನ್ಯ ಪ್ರಸಾದ್ ರಾಜ ಕಾಂಚನ್ ಇವರ ವಿರುದ್ಧ ಇವರ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿರುತ್ತಾರೆ.
ಅವರ ತೇಜೋವದೆಗೆ ಯತ್ನಿಸಿದ್ದಾರೆ ಪ್ರಸಾದ್ ಕಾಂಚನ್ ರವರು ಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ ದಿನ ನಿತ್ಯ ಕಾಂಗ್ರೆಸ್ ಪಕ್ಷದ ಮೂಲ ಕಾಂಗ್ರೆಸ್ಸಿಗರನ್ನು ಭೇಟಿ ಮಾಡಿ ಅವರನ್ನು ಸಕ್ರಿಯಗೊಳಿಸುತ್ತಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡ ಹಾಗೂ ಮಧ್ಯಮ ವರ್ಗದವರ ಕಷ್ಟ ಸುಖಗಳನ್ನು ಆಲಿಸಿ ಜಾತ್ಯಾತೀತ ನೆಲೆಯಲ್ಲಿ ಎಲ್ಲ ಜಾತಿ ಧರ್ಮದವರಿಗೆ ತಮ್ಮಿಂದ ಆದಷ್ಟು ಸಹಾಯವನ್ನು ಮಾಡುತ್ತಾ,ಸರಕಾರಿ ಕಚೇರಿಗಳಲ್ಲಿ ನಡೆಯುವ ಅನ್ಯಾಯವನ್ನು ಸರಿಪಡಿಸಿ ಉಡುಪಿ ವಿಧಾನಸಭಾ ಕ್ಷೇತ್ರದ ಜನಸಾಮಾನ್ಯರ ಬೆಂಬಲಕ್ಕೆ ನಿಂತಿರುತ್ತಾರೆ.
ಇದನ್ನು ಕಂಡು ಕಂಗಾಲಾದ ಅವರ ವಿರೋಧಿ ದುಷ್ಟ ಶಕ್ತಿಗಳು ಮುಂದಿನ ದಿನಗಳಲ್ಲಿ ತಮಗೆ ಉಳಿಗಾಲ ಇಲ್ಲವೆ೦ದರಿತು ಅವರ ತೇಜೋವದೆ ಗೆ ಪ್ರಯತ್ನಿಸಿದ್ದು ಖ೦ಡನಿಯಾ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿತ ಈ ರೀತಿ ಜನಸಾಮಾನ್ಯರ ತೇಜೋವಧೆಗೆ ಯತ್ನಿಸುವ ಈ ದುಷ್ಟ ಶಕ್ತಿಗಳನ್ನು ಕೂಡಲೇ ಬಂಧಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಹಾಗೂ ಸಮಿತಿಯವರು ಒತ್ತಾಯಿಸಿರುತ್ತಾರೆ.