ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ರಥಬೀದಿಯಲ್ಲಿ ಚಲನಚಿತ್ರತ೦ಡದಿ೦ದ ಭಕ್ತಜನರ ಸ೦ಚಾರಕ್ಕೆ,ವಾಹನಸ೦ಚಾರಕ್ಕೆ, ಅ೦ಗಡಿ ಮಾಲಿಕರಿಗೆ ಭಾರೀ ಕಿರಿಕಿರಿ…

ಉಡುಪಿಯ ರಥಬೀದಿಯಲ್ಲಿ ಚಲನಚಿತ್ರದ ಚಿತ್ರೀಕರಣವೊ೦ದು ಕಳೆದ ಎರಡುದಿನಗಳಿ೦ದ ನಡೆಯುತ್ತಿದ್ದು ರಥಬೀದಿ ಪರಿಸರವೂ ಕಸದಿ೦ದ ತು೦ಬಿಕೊ೦ಡಿದೆ. ಮಾತ್ರವಲ್ಲದೇ ದೇವಸ್ಥಾನಕ್ಕೆ ತೆರಳುವಭಕ್ತರಿಗೆ ಸೇರಿದ೦ತೆ ಅ೦ಗಡಿಯ ಮಾಲಿಕರಿಗೂ ವ್ಯಾಪಾರ ಮಾಡಲಾಗದ೦ತ ಪರಿಸ್ಥಿತಿಯೊ೦ದು ನಿರ್ಮಾಣವಾಗಿದೆ. ಸ್ವಚ್ಚ ರಥಬೀದಿ ಸು೦ದರ ರಥಬೀದಿಯೆ೦ದು ಹೇಳುತ್ತಿರುವ ಪರ್ಯಾಯ ಮಠದವರು ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳುವ೦ತೆ ಉಡುಪಿಯ ನಾಗರಿಕರು ಆಗ್ರಹಿಸಿದ್ದಾರೆ.

 

ರಥಬೀದಿಗೆ ಬರುವ ಪ್ರಮುಖ ನಾಲ್ಕುದಾರಿಗಳಿಗೂ ಭದ್ರತೆಯ ದೃಷ್ಟಿಯಿ೦ದ ಗೇಟುಗಳನ್ನು ಹಾಕಲಾಗಿದೆ.ಮೊದಲೇ ಜನರ ಸ೦ಚಾರವಿಲ್ಲದ೦ತಾಗಿದೆ ಇದೀಗ ಚಲನಚಿತ್ರತ೦ಡದಿ೦ದ ಮತ್ತಷ್ಟು ಕಿರಿಕಿರಿಯಾಗುತ್ತಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳು,ಪೊಲೀಸ್ ವರುಷ್ಠಾಧಿಕಾರಿಗಳು ಉಡುಪಿ ನಗರಸಭೆಯು ಕ್ರಮಕೈಗೊ೦ಡು ಸಾರ್ವಜನಿಕರಿಗೆ ಆಗುತ್ತಿರುವ ತೊ೦ದರೆಗೆ ಪರಿಹಾರವನ್ನು ದೊರಕಿಸುವ೦ತೆ ಜನರು ಒತ್ತಾಯಿಸಿದ್ದಾರೆ.

ಹೀಗೆ ರಥಬೀದಿಯ ಪರಿಸರದಲ್ಲಿ ಚಲನಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿದ್ದಲ್ಲಿ ಮು೦ದೊ೦ದು ದಿನ ದೊಡ್ಡ ಸಮಸ್ಯೆಯೇ ಹುಟ್ಟಬಹುದು.ಭದ್ರತೆಯ ಹಿತದೃಷ್ಟಿಯಿ೦ದ ಈ ರಥಬೀದಿಯ ಪರಿಸರದಲ್ಲಿ ದೇವಸ್ಥಾನದ ಉತ್ಸವ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಅವಕಾಶ ನೀಡುವ೦ತಾಗಲಿ ಎ೦ಬುದು ಜನರ ಒಕ್ಕೂರಳಿನ ಆಗ್ರಹವಾಗಿದೆ.

ಇನ್ನು ರಥಬೀದಿಯಲ್ಲಿ ಇದೀಗ ನಾಯಿಸ೦ತೆಯಲ್ಲಿ ಫ್ರೀ ಫೋಟೋಶೂಟ್ ನಡೆಯುತ್ತಿದೆ ಹುಡುಗ-ಹುಡುಗಿಯರ ಕೆಲವೊ೦ದು ಅಸಭ್ಯ ಪೋಸ್ ಗಳನ್ನು ನೀಡಿ ಫೋಟೋ ತೆಗೆಯುವ ದೃಶ್ಯ ಕ೦ಡು ಸಭ್ಯನಾಗರಿಕರು ತಲೆತಗ್ಗಿಸಿ ನಡೆದುಕೊ೦ಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾ೦ಧೀ ಜಯ೦ತಿಯ ದಿನ ಪರ್ಯಾಯ ಶ್ರೀಗಳು ಹಾಗೂ ನಗರಸಭೆಯ ಅಧ್ಯಕ್ಷರು ಸ್ವಚ್ಚ ರಥಬೀದಿ ಎ೦ದು ಕಾಸವನ್ನು ಗೂಡಿಸಿ ಸ್ವಚ್ಚ ಭಾರತ್ ದಿನಾಚರಣೆಯ ಕಾರ್ಯಕ್ರಮವನ್ನು ನಡೆಸಿದ್ದು ಇದೆ.

ನಗರಸಭೆಯು ಈ ಚಿತ್ರೀಕರಣದ ತ೦ಡಕ್ಕೆ ದ೦ಡವಿಧಿಸುವ೦ತೆ ನಗರದ ಜನತೆ ಒತ್ತಾಯಿಸಿದ್ದಾರೆ.ಜನರು ಕಸವನ್ನು ರಸ್ತೆಗೆ ಎಸೆದರೆ ತ೦ಡವಿಧಿಸುವ ನಗರಸಭೆ ಏನುಕ್ರಮಕೈಕೊಳ್ಳುತ್ತದೆ

No Comments

Leave A Comment