ವಿಜಯೇಂದ್ರಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ನೀಡಬೇಕು: ಯತ್ನಾಳ್ ಕಿಡಿ....ಕರ್ನಾಟಕ ಉಪಚುನಾವಣೆ ಫಲಿತಾಂಶ: ಆಡಳಿತಾರೂಢ ಕಾಂಗ್ರೆಸ್ ಕ್ಲೀನ್ ಸ್ವೀಪ್; ಎನ್ ಡಿಎಗೆ ಮುಖಭಂಗ....
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಅವಹೇಳನದ ವಿಚಾರದಲ್ಲಿ ಪರಿಶಿಷ್ಟ ಜಾತಿ ಸಂಘಟನೆಗಳ ನಾಯಕರ ಪತ್ರಿಕಾ ಹೇಳಿಕೆಗೆ ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಸಮಿತಿಯ ವಿಷಾದ
ಉಡುಪಿ: ಕಳೆದ ಎರಡು ಮೂರು ದಿನಗಳಿಂದ ನಮ್ಮ ಮರಾಟಿ ಸಮುದಾಯದ ಉಮೇಶ್ ನಾಯ್ಕ್ ಸೂಡ ರವರು ಡಾ ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿಯವರ ಬಗ್ಗೆ ಅವಹೇಳನ ವಾಗಿ ಮಾತನಾಡಿದ ವಾಟ್ಸ್ಯಾಪ್ಪ್ ಸಂದೇಶಗಳು ಹರಿದಾಡಿದ ಬಗ್ಗೆ ಕೆಲವು ದಲಿತ ಸಂಘಟನೆಯ ನಾಯಕರು ಮರಾಟಿ ಸಮುದಾಯದ ಕುರಿತು ಮಾತನಾಡಿರುತ್ತಾರೆ. ಉಮೇಶ್ ನಾಯ್ಕ್ ಸೂಡ ರವರ ಹೇಳಿಕೆಯು ಅವರ ವಯಕ್ತಿಕ ಹೇಳಿಕೆಯಾಗಿದ್ದು ನಮ್ಮ ಸಂಘಟನೆಗಳ ಅಥವಾ ಸಮುದಾಯದ ಹೇಳಿಕೆ ಯಾಗಿರುವುದಿಲ್ಲ. ನಮ್ಮ ಸಮುದಾಯವು ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ರವರಿಗೆ ಅತೀವ ಗೌರವ ಸಲ್ಲಿಸಿ ಕೊಂಡು ಬಂದಿರುತ್ತದೆ. ಉಮೇಶ್ ನಾಯ್ಕ್ ಸೂಡ ರವರು ನೀಡಿದ ಹೇಳಿಕೆ ಬಗ್ಗೆ ಸಂಘವು ವಿಷಾದ ವ್ಯಕ್ತ ಪಡಿಸುತ್ತದೆ.
ಆದರೆ ಅದೇ ವಿಚಾರವಾಗಿ ನಮ್ಮ ಇಡೀ ಮರಾಟಿ ಸಮುದಾಯವನ್ನು ದೂಷಿಸುವುದು ಸಮಂಜಸವಲ್ಲ. ನಮ್ಮ ಸಮಾಜಕ್ಕೆ ಸಂವಿಧಾನ ದಡಿಯಲ್ಲಿ ದೊರಕಿರುವ ಮೀಸಲಾತಿ ನಮ್ಮ ಹಕ್ಕು, ಹೊರತು ಬಿಕ್ಷೆಯಲ್ಲ. ನಮ್ಮ ಸಮುದಾಯ ಸರಕಾರದಿಂದ ದೊರಕಿರುವ ಮೀಸಲಾತಿಯನ್ನು ಸದ್ಬಳಕೆ ಮಾಡಿ ಕೊಂಡು ಒಂದು ಸಮಯದಲ್ಲಿ ತೀರಾ ಹಿಂದುಳಿದ ಸಮುದಾಯವು ಈಗ ಸಮಾಜದಲ್ಲಿ ಸಾಮಾಜಿಕ ಹಾಗು ಶೈಕಣಿಕ ವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು.
ಕೇವಲ3 ಶೇಕಡಾ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಸಮುದಾಯವು ಸಾಧ್ಯವಾದಷ್ಟು ಅಭಿವೃದ್ಧಿ ಹೊಂದಿದೆ. ಅದೇ ರೀತಿ ತಮಗೂ 15 ಶೇಕಡಾ ರಷ್ಟಿರುವ ಮೀಸಲಾತಿಯನ್ನು ಪಡೆದು ಅಭಿವೃದ್ಧಿ ಹೊಂದಲು ಅವಕಾಶ ದೊರಕಿರುತ್ತದೆ. ಹೋಳಿ ಹಬ್ಬದ ಸಂದರ್ಭ ದಲ್ಲಿ ಮನೆ ಮನೆ ಕುಣಿಯಲು ಹೋಗಿ ಕಾಣಿಕೆ ಪಡೆಯುವುದು ನಮ್ಮ ಹಿರಿಯರು ಹಾಕಿ ಕೊಟ್ಟ ಧಾರ್ಮಿಕತೆಯ ಹಾದಿ ಯಲ್ಲಿ ಸಾಗುದ್ದಿದ್ದೆವೆ. ನಮ್ಮ ಸಮುದಾಯವು ಆಸ್ತಿಕ ಸಮುದಾಯವಾಗಿದ್ದು ಶ್ರೀ ದೇವಿಯ ಆರಾಧಕರಾಗಿ, ಯಾವುದೇ ಸಮುದಾಯದ ಜಾತಿಯನ್ನು ದೂಷಿಸಿಕೊಂಡು ಬಂದವರಲ್ಲ. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಅನೇಕ ಸ್ಪರ್ಶ ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದು ಅದರಲ್ಲಿ ಮರಾಟಿ ಸಮುದಾಯ ಒಂದಾಗಿದೆ.
ನಮ್ಮ ಮರಾಟಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಹಾಗು ಜೀವನ ಪದ್ದತಿ ಗಳನ್ನೂ ಪರಿಶೀಲನೆ ಗೈದು, ಗುಡ್ಡಗಾಡುಗಳ ತಪ್ಪಲಲ್ಲಿ ವಾಸಿಸಿ ಕೊಂಡಿದ್ದ ನಮ್ಮನ್ನು ಕೃಷಿ , ಕೂಲಿ ಆಧಾರಿತ ಬುಡಕಟ್ಟು ಸಮುದಾಯವೆಂದು ಸರಕಾರ “ಗಿರಿಜನರು” ಎಂದು ಗುರುತಿಸಿ ಮೀಸಲಾತಿ ನೀಡಿದೆಯೇ ಹೊರತು, ಅಕ್ರಮವಾಗಿ ಅಥವಾ ಇನ್ನೊಬ್ಬರಿಂದ ಕಸಿದುಕೊಂಡ ಸೌಲಭ್ಯ ಅಲ್ಲ ಎಂದು ಪರಿಶಿಷ್ಟ ಜಾತಿಯ ನಾಯಕರು ಅರಿತು ಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.