ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಆರ್ ಜಿ ಕಾರ್ ಆಸ್ಪತ್ರೆ ಸಮಸ್ಯೆ: 10ನೇ ದಿನಕ್ಕೆ ಕಾಲಿಟ್ಟ ಕಿರಿಯ ವೈದ್ಯರ ಉಪವಾಸ ಸತ್ಯಾಗ್ರಹ, ಮತ್ತೋರ್ವ ವೈದ್ಯ ಆಸ್ಪತ್ರೆಗೆ ದಾಖಲು
ಕೋಲ್ಕತ್ತಾ: ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಇಂದು ಸೋಮವಾರ 10 ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಮತ್ತೊಬ್ಬ ವೈದ್ಯರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪುಲಸ್ತ ಆಚಾರ್ಯ ಅವರನ್ನು ಭಾನುವಾರ ರಾತ್ರಿ ತೀವ್ರ ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಜ್ಯದ ಉತ್ತರ ಭಾಗದ ಕೋಲ್ಕತ್ತಾ ಮತ್ತು ಸಿಲಿಗುರಿ ನಗರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕಿರಿಯ ವೈದ್ಯರಲ್ಲಿ ಮೂವರನ್ನು ಈ ಹಿಂದೆ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಸ್ತುತ ಪುಲಸ್ತ ಅವರು ಸಿಸಿಯುನಲ್ಲಿದ್ದಾರೆ. ಅವರ ದೇಹದ ಪ್ಯಾರಾಮೀಟರ್ ಹದಗೆಟ್ಟಿವೆ. ಅವರಿಗೆ ಚಿಕಿತ್ಸೆ ನೀಡಲು ನಾವು ವೈದ್ಯಕೀಯ ಮಂಡಳಿಯನ್ನು ರಚಿಸಿದ್ದೇವೆ ಎಂದು ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಮಧ್ಯೆ, ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ವೈದ್ಯರ ಜಂಟಿ ವೇದಿಕೆಗೆ (JDP) ಪತ್ರ ಬರೆದಿದ್ದು, ಅಕ್ಟೋಬರ್ 15 ರಂದು ತಮ್ಮ ಉದ್ದೇಶಿತ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು, ಈ ಪ್ರತಿಭಟನೆಯು ರಾಜ್ಯ ಸರ್ಕಾರದ ವಾರ್ಷಿಕ ದುರ್ಗಾಪೂಜೆ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಸದಂತೆ ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ಇಂದು ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಛೇರಿ ಸ್ವಾಸ್ಥ್ಯ ಭವನದಲ್ಲಿ ಸಭೆಗೆ ಆಹ್ವಾನಿಸಿದರು. ಆರೋಗ್ಯ ಮತ್ತು ಯೋಗಕ್ಷೇಮದ ಹಿತದೃಷ್ಟಿಯಿಂದ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲು ಕಿರಿಯ ವೈದ್ಯರಿಗೆ ಸಲಹೆ ನೀಡುವಂತೆ ಮನೋಜ್ ಪಂತ್ ಅವರು ಇಮೇಲ್‌ನಲ್ಲಿ ಜೆಪಿಡಿಯನ್ನು ಒತ್ತಾಯಿಸಿದ್ದಾರೆ.
ಆರ್‌ಜಿ ಕಾರ್ ಆಸ್ಪತ್ರೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಆರೋಗ್ಯ ಕಾರ್ಯದರ್ಶಿ ಎನ್‌ಎಸ್ ನಿಗಮ್ ಅವರನ್ನು ಕೂಡಲೇ ವಜಾಗೊಳಿಸಬೇಕು, ಕೆಲಸದ ಸ್ಥಳ ಭದ್ರತೆ ಮತ್ತು ಇತರ ಕ್ರಮಗಳನ್ನು ನೀಡಬೇಕೆಂದು ಕಿರಿಯ ವೈದ್ಯರು ಒತ್ತಾಯಿಸಿದ್ದಾರೆ.
ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಕೇಂದ್ರೀಕೃತ ರೆಫರಲ್ ವ್ಯವಸ್ಥೆಯನ್ನು ಸ್ಥಾಪಿಸುವುದು, ಹಾಸಿಗೆ ಖಾಲಿ ಇರುವ ಮಾನಿಟರಿಂಗ್ ಸಿಸ್ಟಮ್‌ನ ಅನುಷ್ಠಾನ ಮತ್ತು ಸಿಸಿಟಿವಿ, ಆನ್-ಕಾಲ್ ರೂಮ್‌ಗಳು ಮತ್ತು ವಾಶ್‌ರೂಮ್‌ಗಳಿಗೆ ಅಗತ್ಯ ನಿಬಂಧನೆಗಳು, ಕಾರ್ಯಪಡೆಗಳ ರಚನೆ ಸೇರಿದಂತೆ ಕಿರಿಯ ವೈದ್ಯರು ಇತರ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.