ಉಡುಪಿಯಲ್ಲಿ ‘ಓಶಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ಹೋಟೆಲ್’ ವಿದ್ಯುಕ್ತವಾಗಿ ಉದ್ಟಾಟನೆ
ಉಡುಪಿ: ದೇಶಾದ್ಯಂತ 180ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಹೊಂದಿರುವ ‘ದ ಓಶಿಯನ್ ಪರ್ಲ್ ಗ್ರೂಫ್ ಆಪ್ ಹೊಟೇಲ್’ನಿಂದ ಉಡುಪಿಯಲ್ಲಿ 2ನೇ ಹೊಟೇಲ್ ‘ಓಶಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ಹೋಟೆಲ್’ ಉಡುಪಿ ಹೃದಯ ಭಾಗದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್‌ನಲ್ಲಿ ಬುಧವಾರ ಉದ್ಘಾಟಿಸಲಾಯಿತು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಜಂಟಿಯಾಗಿ ಹೋಟೆಲ್ ಉದ್ಘಾಟಿಸಿದರು. ಓಶಿಯನ್ ಪರ್ಲ್ ಗ್ರೂಪ್‌ನ ಮುಖ್ಯಸ್ಥರಾದ ಜಯರಾಮ್ ಬನಾನ್ ಅವರು ಉಭಯ ಶ್ರೀಗಳನ್ನು ಗೌರವಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಪೇಜಾವರ ಶ್ರೀಗಳು, ಶ್ರೀ ಕೃಷ್ಣನ ನಾಡು ಉಡುಪಿ ಧಾರ್ಮಿಕವಾಗಿ, ಪ್ರವಾಸೋದ್ಯಮ ತಾಣವಾಗಿ ಬಳೆಯುತ್ತಿದೆ. ಜಯರಾಮ್ ಬನಾನ್ ಅವರು ಈ ಹೋಟೆಲ್ ಮೂಲಕ ಉಡುಪಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಕೃಷ್ಣನ ಅನುಗ್ರಹದಿಂದ ನೂತನ ಹೋಟೆಲ್ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸುಬ್ರಹ್ಮಣ್ಯ ಶ್ರೀಗಳು, ಉಡುಪಿ ಆಹಾರೋದ್ಯಮ ಮತ್ತು ಆಧಾರೋಪಚಾರಕ್ಕೆ ಪ್ರಸಿದ್ಧವಾಗಿದೆ. ಆದರಿಂದ ಇಂತಹ ಹೋಟೆಲ್ ಉಡುಪಿಗೆ ಅಗತ್ಯವಿತ್ತು. ಬಹಳ ಪರಿಶ್ರಮಿಯಾಗಿರುವ ಜಯರಾಮ್ ಬನಾನ್ ಅವರು, ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದು, ತಮ್ಮ ಸಮರ್ಥ ಆಡಳಿತದಿಂದ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಇದಕ್ಕೆ ಮೊದಲು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು ಭೇಟಿ ನೀಡಿ ಶುಭ ಹಾರೈಸಿದರು.
ಓಶಿಯನ್ ಪರ್ಲ್ ಸಂಸ್ಥೆಯ ಆಡಳಿತ ನಿರ್ದೇಶಕ ರೋಷನ್ ಬನಾನ್, ಉಪಾಧ್ಯಕ್ಷ ಗಿರೀಶ್ ಮತ್ತು ಶಿವಕುಮಾರ್, ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಆಚಾರ್ಯ, ಮಾಲ್ ಮಾಲೀಕ ಡಾ.ಜೆರ್ರಿ ವಿನ್ಸಂಟ್ ಡಯಾಸ್, ಉದ್ಯಮಿಗಳಾದ ಇಬ್ರಾಹಿಂ ಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಬಿಜೆಪಿ ಮುಖಂಡ ಮಟ್ಟಾರ್ ರತ್ನಾಕರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಭವ್ಯವಾದ ಪೆಸಿಫಿಕ್ ಹಾಲ್‌ಗಳು
ಈ ಹೋಟೆಲ್‌ನಲ್ಲಿ ‘ಗ್ರ್ಯಾಂಡ್ ದಿ ಪೆಸಿಫಿಕ್ 1 ಹಾಲ್’ ಸುಮಾರು 2000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರಲ್ಲಿ ಮದುವೆಗಳು, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ಅದ್ಧೂರಿಯ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಿದೆ. ‘ಪೆಸಿಫಿಕ್ 2’ ಹಾಲ್ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಇದು ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ,