ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಅ.9: ಗೀತಾಂಜಲಿಯಲ್ಲಿ ಪುರುಷರ ಉಡುಪು ವಿಸ್ತೃತ ವಿಭಾಗ ಶುಭಾರಂಭ
ಉಡುಪಿ:ವಸ್ತ್ರೋದ್ಯಮದಲ್ಲಿ ಹೆಸರುವಾಸಿಯಾದ, ಕರಾವಳಿ ಕರ್ನಾಟಕದ ಅತಿ ವಿಶಾಲವಾದ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಪುರುಷರ ಉಡುಪುಗಳ ಪ್ರತ್ಯೇಕ ವಿಸ್ತೃತ ವಿಭಾಗ ಅಕ್ಟೋಬರ್ 9 ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಸಂತೋಷ್ ವಾಗ್ಳೆ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಗ್ರಾಹಕರೇ ದೇವರು’ ಎಂಬ ಪರಿಕಲ್ಪನೆಯೊಂದಿಗೆ ಕಳೆದ ನಾಲ್ಕು ದಶಕಗಳಿಂದ ವಿವಿಧ ಉದ್ಯಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಸುಮಾರು ಎರಡು ದಶಕಗಳಿಂದ ಕಾರ್ಯನಿರ್ವಹಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಗೀತಾಂಜಲಿ ಸಿಲ್ಕ್ಸ್ ಪುರುಷರು, ಮಹಿಳೆಯರು ಮತ್ತು ಮಕ್ಕಳ ಉಡುಪುಗಳ ಮಹಡಿ ಹೊಂದಿದೆ. ಇದೀಗ ತಮ್ಮ ಸಂಸ್ಥೆಯ ಮೊದಲ ಮಹಡಿಯಲ್ಲಿ ಸ್ವದೇಶಿ ಮತ್ತು ವಿದೇಶಿಯ ಪುರುಷರ ಎಲ್ಲಾ ಪ್ರಮುಖ ಬ್ರಾಂಡ್ ಗಳು, ಮದುವೆ ಇತ್ಯಾದಿ ಶುಭ ಸಮಾರಂಭಗಳಿಗೆ ಬೇಕಾದ ಪಾರಂಪರಿಕ ಮತ್ತು ಆಧುನಿಕ ಶೈಲಿಯ ವಸ್ತ್ರ ವೈವಿಧ್ಯಗಳು, ಆಫೀಸ್ ವೇರ್, ಕ್ಯಾಶ್ಯುವಲ್ ವೇರ್, ಒಳಉಡುಪು, ಗ್ರಾಹಕರ ಅಭಿರುಚಿಗೆ ಅನುಸಾರವಾಗಿ ಸೂಟಿಂಗ್ಸ್, ಶರ್ಟಿಂಗ್ಸ್ ಇತ್ಯಾದಿಗಳನ್ನೊಳಗೊಂಡ ವಿಸ್ತೃತ ಪ್ರತ್ಯೇಕ ವಿಭಾಗ ಕಾರ್ಯಾಚರಿಸಲಿದೆ. ಸುಮಾರು 22ಕ್ಕೂ ಅಧಿಕ ಬ್ರಾಂಡ್ ಗಳ ವಿವಿಧ ವಿನ್ಯಾಸದ ಉಡುಪುಗಳು ಲಭ್ಯವಿದೆ ಎಂದು ಸಂತೋಷ್ ವಾಗ್ಳೆ ಮಾಹಿತಿ ನೀಡಿದರು.
ಗ್ರಾಹಕರಿಂದಲೇ ಶುಭಾರಂಭ…
ನಮ್ಮ ಅಭಿವೃದ್ಧಿ ಪಥದಲ್ಲಿ ಗ್ರಾಹಕರು ನೀಡಿದ ಅದ್ಭುತ ಸಹಕಾರಕ್ಕೆ ಸದಾ ಕೃತಜ್ಞರಾಗಿರುವ ನಾವು, ನೂತನ ವಿಸ್ತೃತ ವಿಭಾಗವನ್ನು ಅ. 9ರಂದು ಬೆಳಿಗ್ಗೆ 9.45 ಗಂಟೆಗೆ ಆಗಮಿಸುವ ಗ್ರಾಹಕರಿಂದಲೇ ಉದ್ಘಾಟಿಸಲಾಗುವುದು. ಆ ವೇಳೆಗೆ ಆಗಮಿಸುವ ಗ್ರಾಹಕರೇ ನಮ್ಮ ಪಾಲಿನ ಗಣ್ಯ ಅತಿಥಿಗಳು ಎಂದು ವಿನೀತರಾಗಿ ಸಂತೋಷ ವಾಗ್ಳೆ ತಿಳಿಸಿದರು.
ಗೀತಾಂಜಲಿ ಸಿಲ್ಕ್ಸ್ ಪಾಲುದಾರರಾದ ರಾಮಕೃಷ್ಣ ನಾಯಕ್(ಆರ್.ಕೆ.) ನಾಯಕ್, ಲಕ್ಷ್ಮಣ ನಾಯಕ್, ರಮೇಶ ನಾಯಕ್ ಮತ್ತು ಹರೀಶ ನಾಯಕ್ ಇದ್ದರು