ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್....ಮುಂದುವರೆದ ನಕ್ಸಲ್ ಕೂಂಬಿಂಗ್: ಶರಣಾಗತಿಗೆ ಸೂಚನೆ, ಪ್ಯಾಕೇಜ್ ನೀಡುತ್ತೇವೆ ಎಂದ ಪರಮೇಶ್ವರ್
ಪಂಜಾಬ್ ಎಎಪಿ ನಾಯಕ ಗುಂಡು ತಗುಲಿ ಆಸ್ಪತ್ರೆಗೆ ದಾಖಲು
ತೀವ್ರ ವಾಗ್ವಾದದ ವೇಳೆ ಶಿರೋಮಣಿ ಅಕಾಲಿದಳದ ಮುಖಂಡರೊಬ್ಬರು ಹಾರಿಸಿದ ಗುಂಡು ತಗುಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ
(ಎಎಪಿ) ಮುಖಂಡರೊಬ್ಬರು ಗಾಯಗೊಂಡಿದ್ದಾರೆ. ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.ಗಾಯಗೊಂಡ ಸ್ಥಳೀಯ ಎಎಪಿ ನಾಯಕ ಮನದೀಪ್ ಸಿಂಗ್ ಬ್ರಾರ್ ಅವರನ್ನು ಪಂಜಾಬ್‌ನ ಜಲಾಲಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರ ಗಂಭೀರ ಸ್ಥಿತಿಯನ್ನು ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಲುಧಿಯಾನದ ಜಿಲ್ಲಾ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಜಲಾಲಾಬಾದ್ ಎಎಪಿ ಶಾಸಕ ಜಗದೀಪ್ ಕಾಂಬೋಜ್ ಗೋಲ್ಡಿ ಅವರು ಬುಲೆಟ್ ಅನ್ನು ಅಕಾಲಿ ನಾಯಕ ವರದೇವ್ ಸಿಂಗ್ ಮಾನ್ ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿ (ಬಿಡಿಪಿಒ) ಕಚೇರಿಯ ಹೊರಗೆ ಘಟನೆ ನಡೆದಿದೆ. ಘಟನೆಯ ಬಗ್ಗೆ ತಿಳಿದ ಫಾಜಿಲ್ಕಾ ಹಿರಿಯ ಪೊಲೀಸ್ ಅಧಿಕಾರಿ ವರೀಂದರ್ ಸಿಂಗ್ ಬ್ರಾರ್ ಜಲಾಲಾಬಾದ್‌ಗೆ ಧಾವಿಸಿ ಪರಿಶೀಲನೆ ನಡೆಸಿದ್ಧಾರೆ.