ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಮುಂಬೈ: ಅಂಗಡಿ ಮತ್ತು ವಸತಿ ಸಮುಚ್ಚಯದಲ್ಲಿ ಬೆಂಕಿ, 7 ಮಂದಿ ಸಾವು
ಮುಂಬೈ: ವಾಣಿಜ್ಯ ನಗರಿ ಮುಂಬೈನ ಚೆಂಬೂರ್ ನಲ್ಲಿ ಎರಡು ಅಂತಸ್ತಿನ ಅಂಗಡಿ ಮತ್ತು ವಸತಿ ಕಟ್ಟಡದಲ್ಲಿ ಭಾನುವಾರ ಬೆಳಗ್ಗೆ ಅಗ್ನಿ ಅವಘಡ ಉಂಟಾಗಿ ಏಳು ವರ್ಷದ ಬಾಲಕಿ ಸೇರಿದಂತೆ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೆಂಬೂರ್ ಪ್ರದೇಶದ ಸಿದ್ಧಾರ್ಥ್ ಕಾಲೋನಿಯಲ್ಲಿ ಇಂದು ಮುಂಜಾನೆ 5.20ರ ಸುಮಾರಿಗೆ ಈ ಘಟನೆ ನಡೆದಿದೆ. ಕಟ್ಟಡದ ನೆಲ ಮಹಡಿಯನ್ನು ಅಂಗಡಿಯಾಗಿ ಮತ್ತು ಮೇಲಿನ ಮಹಡಿಯನ್ನು ನಿವಾಸವಾಗಿ ಬಳಸಲಾಗಿತ್ತು.
ನೆಲ ಮಹಡಿಯಲ್ಲಿನ ಅಂಗಡಿಯಲ್ಲಿನ ವಿದ್ಯುತ್ ವೈರಿಂಗ್ ಮತ್ತು ಇನ್ಸ್ಟಾಲೇಷನ್ ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಮೇಲಿನ ಮಹಡಿಗೆ ವ್ಯಾಪಿಸಿತು, ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದರು, ಕೂಡಲೇ ಅವರನ್ನು ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರೆಲ್ಲರೂ ಮೃತಪಟ್ಟರು.
ಮೃತರನ್ನು ಪ್ಯಾರಿಸ್ ಗುಪ್ತಾ (7ವ), ಮಂಜು ಪ್ರೇಮ್ ಗುಪ್ತಾ (30ವ), ಅನಿತಾ ಗುಪ್ತಾ (39ವ), ಪ್ರೇಮ್ ಗುಪ್ತಾ (30ವ) ಮತ್ತು ನರೇಂದ್ರ ಗುಪ್ತಾ (10ವ) ಎಂದು ಗುರುತಿಸಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ.