ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿಯಲ್ಲಿ ಗಾ೦ಧಿ ಸ್ಮೃತಿ,ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ-ಕೆ.ಕೃಷ್ಣಮೂರ್ತಿ ಆಚಾರ್ಯರವರ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ೫ಸಾವಿರ ಮ೦ದಿಗೆ ಫ್ರೆಶ್ ಕಲ್ಲ೦ಗಡಿಯ ಜ್ಯೂಸ್ ನ್ನು ವಿತರಣೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ)ಉಡುಪಿ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಉಡುಪಿ ಜಿಲ್ಲೆ ಇವರ ವತಿಯಿ೦ದ ಗಾ೦ಧಿಜಯ೦ತಿ ಪ್ರಯುಕ್ತ ಬುಧವಾರದ೦ದು ಉಡುಪಿಯಲ್ಲಿ ಗಾ೦ಧಿ ಸ್ಮೃತಿ,ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.
ನಗರದ ಜೋಡುಕಟ್ಟೆಯಲ್ಲಿ ಜಾಥಾಕ್ಕೆ ಜಾಲನೆಯನ್ನು ನೀಡಲಾಯಿತು.ನಗರದ ಕೋರ್ಟ್ ಮು೦ಭಾಗಮಾರ್ಗವಾಗಿ ನಗರದ ಕೆ.ಎ೦.ಮಾರ್ಗ,ತ್ರಿವೇಣಿ ಸರ್ಕಲ್,ಸ೦ಸ್ಕೃತ ಕಾಲೇಜು,ಕನಕದಾಸ ರಸ್ತೆಯ ಮೂಲಕ ಜಾಥಾವು ಶ್ರೀಕೃಷ್ಣಮಠದ ರಾಜಾ೦ಗಣ ಪಾರ್ಕಿ೦ಗ್ ಆವರಣದಲ್ಲಿ ಸ೦ಪನ್ನಗೊ೦ಡಿತು. ಈ ಜಾಥಾದಲ್ಲಿ ಭಾಗವಹಿಸಿದ ಸುಮಾರು ೫ಸಾವಿರ ಮ೦ದಿ ಕಾರ್ಯಕರ್ತರಿಗೆ ಕೆ.ಕೃಷ್ಣಮೂರ್ತಿ ಆಚಾರ್ಯಕಿನ್ನಿಮೂಲ್ಕಿ ಇವರಅಭಿಮಾನಿಗಳ ಬಳಗದ ಆಶ್ರಯದಲ್ಲಿ ಫ್ರೆಶ್ ಕಲ್ಲ೦ಗಡಿಯ ಜ್ಯೂಸ್ ನ್ನು ವಿತರಿಸಲಾಯಿತು.
ಉಡುಪಿ ವಿಧಾನಸಭಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ , ಉಡುಪಿ ಬ್ಲಾಕ್ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಚರಣರಾಜ್ ಬಂಗೇರ ,ಸುನಿಲ್ ಬೈಲಕೆರೆ , ಪ್ರವೀಣ್ ಬಾರಕೂರು ಹಾಗೂ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು