ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಥೈಲ್ಯಾಂಡ್​ನಲ್ಲಿ ಶಾಲಾ ಬಸ್‌ಗೆ ಬೆಂಕಿ- 25ವಿದ್ಯಾರ್ಥಿಗಳು ದುರ್ಮರಣ

ಥೈಲ್ಯಾಂಡ್​,:ಅ.01ಥೈಲ್ಯಾಂಡ್​ನಲ್ಲಿ​ 44 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್​ ಬೆಂಕಿಯಿಂದ ಹೊತ್ತಿ ಉರಿದ ಪರಿಣಾಮ 25 ವಿದ್ಯಾರ್ಥಿಗಳು ಸಾವನ್ನಪ್ಪಿ ಘಟನೆ ನಡೆದಿದೆ.

ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಹೆಚ್ಚಿನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಕಿಯ ಕಾರಣ ಇದುವರೆಗೆ ತಿಳಿದಿಲ್ಲ.ಸ್ಥಳೀಯ ಕಾಲಮಾನ ಮಧ್ಯಾಹ್ನ 12.30 ರ ಸುಮಾರಿಗೆ ಥೈಲ್ಯಾಂಡ್​ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ಲಾನ್ ಸಕ್ ಜಿಲ್ಲೆಯ ವಾಟ್ ಖಾವೊ ಪ್ರಾಯ ಸಂಘರಮ್‌ನಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸದಲ್ಲಿ ಆರು ಶಿಕ್ಷಕರು ಸಹ ಭಾಗವಹಿಸಿದ್ದರು. ಅವರ ಬಗ್ಗೆ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

ಗೃಹ ಸಚಿವ ಅನುತಿನ್ ಚರಣ್ವಿರಾಕುಲ್ ಅವರು ಘಟನಾ ಸ್ಥಳದಲ್ಲಿ ತನಿಖೆಯನ್ನು ಪೂರ್ಣಗೊಳಿಸದ ಕಾರಣ ಸಾವಿನ ಸಂಖ್ಯೆಯನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಬದುಕುಳಿದವರ ಸಂಖ್ಯೆಯನ್ನು ಆಧರಿಸಿ, 25 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ನಿಲ್ಲಿಸಿದ ಬಸ್ಸಿನ ಹೊರಗೆ ಕಪ್ಪು ಹೊಗೆಯು ಕಾಣಿಸಿಕೊಂಡಿತ್ತು, ಸದ್ಯ ವಿದ್ಯಾರ್ಥಿಗಳ ವಯಸ್ಸು ತಿಳಿದುಬಂದಿಲ್ಲ.

No Comments

Leave A Comment