ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಪಾಕ್ ಸೇನೆ ಮೇಲೆ ಮತ್ತೊಂದು ಭೀಕರ ದಾಳಿ: 6 ಸೈನಿಕರು ಸಾವು, 11 ಸೈನಿಕರಿಗೆ ಗಂಭೀರ ಗಾಯ!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪಾಕ್ ಸೇನೆಯೇ ಸುರಕ್ಷಿತವಾಗಿಲ್ಲ. ಪ್ರತಿದಿನ ಅವರ ಮೇಲೆ ದಾಳಿಗಳು ನಡೆಯುತ್ತಿವೆ. ದಕ್ಷಿಣ ವಜೀರಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆದಿದೆ. ಈ ದಾಳಿಯಲ್ಲಿ ಆರು ಯೋಧರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಪಾಕಿಸ್ತಾನ ಸೇನೆ ಮೇಲೆ ಉಗ್ರರ ದಾಳಿ ನಿಂತಿಲ್ಲ. ಜೂನ್ ತಿಂಗಳಿನಿಂದ ಪ್ರತಿ ತಿಂಗಳು ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ಪ್ರತಿ ದಾಳಿಯಲ್ಲಿ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದು ಹಲವರು ಗಾಯಗೊಂಡಿದ್ದಾರೆ.

ಆಗಸ್ಟ್ 22ರ ಘಟನೆಯಲ್ಲಿ 11 ಯೋಧರು ಸಾವು

ಇದಕ್ಕೂ ಮುನ್ನ ಆಗಸ್ಟ್ 22ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಇದರಲ್ಲಿ ಕನಿಷ್ಠ 11 ಸೈನಿಕರು ಸಾವನ್ನಪ್ಪಿದರು. ಲಾಹೋರ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ರಹೀಮ್ ಯಾರ್ ಖಾನ್ ಜಿಲ್ಲೆಯಲ್ಲಿ ಹಲವಾರು ಯೋಧರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಉಗ್ರರು ರಾಕೆಟ್‌ಗಳ ಮೂಲಕ ದಾಳಿ ನಡೆಸಿದ್ದಾರೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಜೂನ್ 9ರಂದು 7 ಯೋಧರು ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಏಳು ಸೈನಿಕರು ಮೃತಪಟ್ಟಿದ್ದಾರೆ. ಸೈನಿಕರ ಸಾವಿನ ಸುದ್ದಿಯಿಂದ ಆಘಾತಕ್ಕೊಳಗಾದ ಪ್ರಧಾನಿ ಶಹಬಾಜ್ ಷರೀಫ್ ಅವರು ಭಯೋತ್ಪಾದನೆಯನ್ನು ಕೊನೆಗೊಳಿಸುವುದಾಗಿ ಪಣ ತೊಟ್ಟರು. ಭಾನುವಾರ ಲಕ್ಕಿ ಮಾರ್ವತ್ ಜಿಲ್ಲೆಯ ಸರಬಂದ್ ಪೋಸ್ಟ್ ಕಚ್ಚಿ ಕಮರ್ ಕಡೆಗೆ ಹೋಗುತ್ತಿದ್ದ ಭದ್ರತಾ ಸಿಬ್ಬಂದಿಯ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಇದರಲ್ಲಿ ಒಬ್ಬ ಕ್ಯಾಪ್ಟನ್ ಸೇರಿದಂತೆ ಏಳು ಯೋಧರು ಸಾವನ್ನಪ್ಪಿದ್ದರು.

No Comments

Leave A Comment