ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಆತಂಕ! ಆಹಾರ ಗುಣಮಟ್ಟದ ಬಗ್ಗೆ ಎಚ್ಚರವಹಿಸಲು ಸೂಚನೆ

ದಕ್ಷಿಣ ಕನ್ನಡ, ಸೆ.20: ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಓರ್ವ ವ್ಯಕ್ತಿಯಲ್ಲಿ ಕಾಲರಾ(cholera) ಸೋಂಕು ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯ ಹೊಸ್ಮಾರುವಿನ ಹೋಟೆಲ್​ನಿಂದ ಸೊಂಕು ಸಾಮೂಹಿಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಮಾಹಿತಿ‌ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸೋಂಕು ಪತ್ತೆ ಹಿನ್ನಲೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್ ಮಾಲೀಕರ ಜೊತೆ ವಿಶೇಷ ಸಭೆ ನಡೆಸಿದ್ದೇವೆ ಎಂದರು.

ಹೋಟೆಲ್ ಮಾಲೀಕರ ಜೊತೆ ವಿಶೇಷ ಸಭೆ

ಇನ್ನು ಸಭೆಯಲ್ಲಿ ಕಾಲರಾ ಸೋಂಕು ಪ್ರಮುಖವಾಗಿ ಕಲುಷಿತ ಆಹಾರದಿಂದ ಹರಡುವ ಸಾಧ್ಯತೆ ಇದೆ. ಹೀಗಾಗಿ ಕಡ್ಡಾಯವಾಗಿ ಆಹಾರ ಗುಣಮಟ್ಟದ ಬಗ್ಗೆ ಜಾಗ್ರತೆ ವಹಿಸಲು ಸೂಚನೆ ನೀಡಿದ್ದೇವೆ‌. ಜೊತೆಗೆ ಕಲುಷಿತ ಆಹಾರ, ಹಳಸಿದ ಆಹಾರವನ್ನ ಗ್ರಾಹಕರಿಗೆ ನೀಡಬಾರದು. ಪ್ರಮುಖವಾಗಿ ತರಕಾರಿ, ಹಣ್ಣು ಹಂಪಲು ಗುಣಮಟ್ಟವನ್ನ ಕಾಪಾಡಬೇಕು. ಗ್ರಾಹಕರಿಗೆ ನೀಡುವ ಪಾತ್ರೆ ಪ್ಲೇಟ್​ಗಳನ್ನ ಬಿಸಿ ನೀರಿನಲ್ಲಿ ತೊಳೆಯಬೇಕು ಎಂದು ಸೂಚಿಸಲಾಗಿದೆ.

ಆಹಾರ ಸ್ವಲ್ಪ ಕಲುಷಿತವಾದರೂ ಕಾಲರಾ ಅಪಾಯ

ಬೇಸಿಗೆ ಸಂದರ್ಭದಲ್ಲಿ ಶುದ್ಧ ನೀರು ಬಳಸಬೇಕು ಹಾಗೂ ಬೇಯಿಸಿದ ಆಹಾರವನ್ನ ಬಳಕೆ ಮಾಡುವುದನ್ನ ಕಡಿಮೆ ಮಾಡಬೇಕು‌‌. ಆಹಾರ ಸ್ವಲ್ಪ ಕಲುಷಿತವಾದರೂ ಕಾಲರಾ ಅಪಾಯವಿದೆ. ಪಂಚಾಯತ್ ರಾಜ್ ವ್ಯಾಪ್ತಿಯ ನೀರಿನ ತೊಟ್ಟಿಗಳ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕ್ಲೋರಿನೇಷನ್ ಹಾಗೂ ಸೂಪರ್ ಕ್ಲೋರಿನೇಷನ್ ಮಾಡಬೇಕು. ಕಲುಷಿತ ಆಹಾರ ಸೇವನೆ ಮಾಡುವುದರಿಂದ ಕಾಲರಾ ಸೋಂಕು ಹರಡಲಿದ್ದು, ತೀವ್ರ ವಾಂತಿ ಭೇದಿಯಾಗಿ ವ್ಯಕ್ತಿ ಸಾವನ್ನಪ್ಪುವ ಆತಂಕ ಇದೆ ಎಂದರು.

No Comments

Leave A Comment