ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ನ್ಯಾಯಾಧೀಶರ ವಿರುದ್ಧವೇ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಮಾಜಿ ಪೊಲೀಸ್ ಆಯುಕ್ತ!
ಗುರುಗ್ರಾಮ್: ಮಾಜಿ ಪೊಲೀಸ್ ಕಮಿಷನರ್ ಕೃಷ್ಣ ಕುಮಾರ್ ರಾವ್ ಅವರು ನ್ಯಾಯಾಂಗ ಆದೇಶದಲ್ಲಿ ತಮ್ಮ ವಿರುದ್ಧ ವ್ಯತಿರಿಕ್ತ ಹೇಳಿಕೆಗಾಗಿ ನ್ಯಾಯಾಧೀಶರ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು ಅದೇ ದಿನ ಈ ಬಗ್ಗೆ ವಿಚಾರಣೆ ಕೂಡ ನಡೆದಿತ್ತು. ನವೆಂಬರ್ 21ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.
ಹಿರಿಯ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯ ಪ್ರಕಾರ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಮಿತ್ ಸೆಹ್ರಾವತ್, ಫೆಬ್ರವರಿ 2022ರಲ್ಲಿ ಹೊರಡಿಸಿದ ಆದೇಶದಲ್ಲಿ, ಬಹುಕೋಟಿ ದರೋಡೆಗೆ ಸಂಬಂಧಿಸಿದಂತೆ ಗುರುಗ್ರಾಮ್ ಮಾಜಿ ಪೊಲೀಸ್ ಉಪ ಕಮಿಷನರ್ ಧೀರಜ್ ಸೇಟಿಯಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು ಪ್ರಕರಣ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚು ನಿಗೂಡವಾಗಿದೆ ಎಂದು ಹೇಳಿದ್ದರು.
ಪ್ರಕರಣದ ಪ್ರಮುಖ ಶಂಕಿತ ಡಾ. ಸಚಿಂದರ್ ಜೈನ್ ನೇವಲ್ ನೀಡಿದ ತಪ್ಪೊಪ್ಪಿಗೆಯನ್ನು ಆಧರಿಸಿ, ಪ್ರಕರಣದ ತನಿಖೆಯನ್ನು ಹಳಿತಪ್ಪಿಸಲು ಲಂಚ ಪಡೆದ ಆರೋಪ ಹೊತ್ತಿರುವ ಸೆಟಿಯಾ ರಾವ್ ಅವರ ನೇತೃತ್ವದಲ್ಲಿ ಈ ರೀತಿ ಮಾಡಿರುವುದು ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ವಿಶೇಷವಾಗಿ ಗುರುಗ್ರಾಮ್ ಕಮಿಷನರೇಟ್‌ನಲ್ಲಿ ಅವರನ್ನು ಭೇಟಿಯಾಗಲು ದಲ್ಲಾಳಿಗಳು ಬರುತ್ತಿದ್ದರು.
ಹಿಂದಿನ ಪೊಲೀಸ್ ಕಮಿಷನರ್ ಅವರ ಒಪ್ಪಿಗೆಯೊಂದಿಗೆ ಈ ಸಂಪೂರ್ಣ ಪ್ರಕ್ರಿಯೆಯನ್ನು ಶಂಕಿತನ ಬಂಧನವಿಲ್ಲದೆ ನಡೆಸಲಾಗಿದೆಯೇ ಎಂದು ತನಿಖಾಧಿಕಾರಿಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾಜಿ ಪೊಲೀಸ್ ಕಮಿಷನರ್ ಕೃಷ್ಣ ಕುಮಾರ್ ರಾವ್ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ, ನ್ಯಾಯಾಧೀಶರ ಹೇಳಿಕೆಗಳು ಊಹೆಯ ಆಧಾರದ ಮೇಲೆ ಮತ್ತು ಯಾವುದೇ ನ್ಯಾಯಾಂಗ ಆಧಾರವನ್ನು ಹೊಂದಿಲ್ಲ ಎಂದು ವಾದಿಸಿದರು. ಘಟನೆಗಳ ಬಗ್ಗೆ ಅವರ ಅಜ್ಞಾನದ ಬಗ್ಗೆ ಅವರ ಹೇಳಿಕೆಗಳು ಸ್ವಭಾವತಃ ವೈಯಕ್ತಿಕ ಮತ್ತು ಜಾಮೀನು ಅರ್ಜಿಯ ನಿರ್ಧಾರಕ್ಕೆ ಸಂಬಂಧಿಸಿಲ್ಲ ಎಂದು ಅವರು ಹೇಳಿದರು.