ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಪಣಿಯಾಡಿಯಲ್ಲಿ ಸ೦ಭ್ರಮದ ಅನಂತವೃತ ಹಾಗೂ ಕದಳಿ ಪೂಜೆ

ಉಡುಪಿ:ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತವ್ರತ ಕಾರ್ಯಕ್ರಮ ದೇವಾಲಯದ ತಂತ್ರಿಗಳವರಾದ ಹಯವದನ ತಂತ್ರಿ, ವಾದಿರಾಜ ತಂತ್ರಿ, ಪ್ರದಾನ ಅರ್ಚಕ ರಾಘವೇಂದ್ರ ಭಟ್,ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಅನಂತ ವಿಪ್ರ ಬಳಗದವರ ಸಹಕಾರದಿಂದ ವೈಭವದಿಂದ ಜರುಗಿತು.

ವಿಶೇಷವಾಗಿ ಅನಂತ ಕದಳಿ ಸಮರ್ಪಣೆ ಸೇವೆ ಭಕ್ತಾದಿಗಳವರಿಂದ ನಡೆಯಿತು.

ಕದಿರು ಕಟ್ಟುವುದು, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಕಲಶ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ,ಲಕ್ಷ್ಮೀ ಶೋಭಾನೆ, ಮಹಾಪೂಜೆ,ವೃತದಾರಿಗಳ ಕೈಗೆ ಅನಂತ ಸೂತ್ರದಾರ ಕಟ್ಟುವ ಪ್ರಕ್ರಿಯೆ, ಅನ್ನಸಂತರ್ಪಣೆ, ವಿಶೇಷ ಭಜನೆ, ಹೂವಿನ ಪೂಜೆ, ರಂಗಪೂಜೆ, ಅಸ್ಟವಧಾನ ಸೇವೆ ನಡೆಯಿತು.

ಭಕ್ತರು ಬೆಳಿಗ್ಗೆನಿಂದ ರಾತ್ರಿಯ ತನಕ ಶ್ರೀ ಕ್ಷೇತ್ರ ಸ್ವಾಮಿಯದರ್ಶನ ಪಡೆದು ವಿಶೇಷ ಕದಳಿ ಪ್ರಸಾದ
ಸ್ವೀಕರಿಸಿದರು.

No Comments

Leave A Comment