ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಪೆಟ್ರೋಲ್ ಸೋರಿಕೆಯಾಗಿ ಟ್ಯಾಂಕರ್ ಸ್ಫೋಟ – 25 ಮಂದಿ ಸಾವು, 40 ಜನರಿಗೆ ಗಾಯ

ಹೈತಿ,ಸೆ.15,ಹೈತಿಯ ದಕ್ಷಿಣ ಪೆನಿನ್ಸುಲಾದ ರಸ್ತೆಯೊಂದರಲ್ಲಿ ಪೆಟ್ರೋಲ್ ಸೋರಿಕೆಯಾದ ಟ್ಯಾಂಕರ್ ಟ್ರಕ್ ಸ್ಫೋಟಗೊಂಡು 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಸುಮಾರು 40 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಧ್ಯರಾತ್ರಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಟ್ಯಾಂಕರ್ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸುಮಾರು 20 ಮನೆಗಳೂ ಸುಟ್ಟು ಕರಕಲಾಗಿದೆ.

ಟ್ಯಾಂಕರ್ ಪಲ್ಟಿಯಾದ ನಂತರ ಕೆಲವರು ರಸ್ತೆಯಲ್ಲಿ ಸುರಿದ ಪೆಟ್ರೋಲ್ ಸಂಗ್ರಹಿಸಲು ಓಡಿದರು. ಈ ಸಂದರ್ಭದಲ್ಲಿ ಇಂಧನ ಟ್ಯಾಂಕರ್‌ನಲ್ಲಿ ಸ್ಫೋಟ ಸಂಭವಿಸಿದೆ. ಬೆಂಕಿ ವೇಗವಾಗಿ ಹರಡಿದೆ.ಈ ಕಾರಣದಿಂದಾಗಿ ಜನರು ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗಿದೆ.

No Comments

Leave A Comment