ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ: 6ನೇ ತರಗತಿ ವಿದ್ಯಾರ್ಥಿನಿಗೆ ಟೈಪ್ 1 ಡಯಾಬಿಟಿಸ್; ಚಿಕಿತ್ಸೆಗಾಗಿ ಧನ ಸಹಾಯ ಕೋರಿದ ಕುಟುಂಬ

ಉಡುಪಿ: ಸೆ.11. ಶಾಲೆಗೆ ಹೋಗಿ ಚೆನ್ನಾಗಿ ಓದುತ್ತಾ, ತನ್ನ ಸ್ನೇಹಿತರೊಂದಿಗೆ ಆಟವಾಡಿಕೊಂಡು ಇರಬೇಕಾದ 6ನೇ ತರಗತಿ ವಿದ್ಯಾರ್ಥಿನಿ ಫಿಯೋನಾ ಜೀವಿತಾ ಮಸ್ಕರೇನಸ್ ಅವರಿಗೆ ಟೈಪ್ 1 ಡಯಾಬಿಟಿಸ್ ನಿಂದ ಬಳಳುತ್ತಿದ್ದಾರೆ. ಆಕೆಯ ಚಿಕಿತ್ಸೆಗಾಗಿ ಕುಟುಂಬವು ಹಣಸಹಾಯ ಕೋರಿದೆ.

ಎಂಟು ತಿಂಗಳ ಹಿಂದೆ ಫಿಯೋನಾಗೆ ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್ ಇರುವುದು ಪತ್ತೆಯಾಗಿದೆ. ಸದ್ಯ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಿಯೋನಾ ಅವರ ತಂದೆ ಫ್ರಾನ್ಸಿಸ್ ಮಸ್ಕರೇನಸ್ ಆಟೋ ಚಾಲಕರಾಗಿದ್ದು, ಅವರು ಕುಟುಂಬದ ಏಕೈಕ ಆಧಾರವಾಗಿದ್ದಾರೆ. ತಾಯಿ ಜ್ಯೋತಿ ಮಸ್ಕರೇನಸ್ ಅವರು ಕಾಲು ನೋವಿನಿಂದ ಬಳಲುತ್ತಿದ್ದು, ಹೊರಗೆ ಹೋಗಿ ದುಡಿಯಲು ಸಾಧ್ಯವಾಗುತ್ತಿಲ್ಲ. ಇನ್ನು ಫಿಯೋನಾಗೆ 3ನೇ ತರಗತಿಯಲ್ಲಿ ಓದುವ ತಂಗಿಯೊಬ್ಬಳು ಇದ್ದಾಳೆ. ತಂದೆ ಫ್ರಾನ್ಸಿಸ್ ಮಸ್ಕರೇನಸ್ ಅವರ ಮೇಲೆ ಮಾತ್ರ ಅವಲಂಬಿತವಾಗಿರುವ ಕುಟುಂಬವು, ಹಿರಿಯ ಮಗಳಿಗೆ ಮಧುಮೇಹ ಇರುವುದು ಪತ್ತೆಯಾದ ನಂತರ ತೀವ್ರ ತೊಂದರೆಯಲ್ಲಿ ಸಿಲುಕಿದೆ.

ಸದ್ಯ ಫಿಯೋನಾ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಫಿಯೋನಾ ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗುತ್ತದೆ. ಜೊತೆಗೆ ಈ ಇನ್ಸುಲಿನ್ ಅನ್ನು ಜೀವನಪೂರ್ತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಫಿಯೋನಾ ಅವರ ಔಷಧಿಗಾಗಿ ಕುಟುಂಬವು ವರ್ಷಕ್ಕೆ 1,00,000 ರೂ., ಭರಿಸಬೇಕಾಗಿದೆ. ಆದರೆ ಫಿಯೋನಾ ಕುಟುಂಬವು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಆಕೆಯ ಚಿಕಿತ್ಸೆಗೆ ನೆರವಾಗಲು ಕುಟುಂಬವು ಸಹೃದಯಿ ದಾನಿಗಳಿಂದ ಹಣಕಾಸಿನ ಸಹಾಯವನ್ನು ಕೋರಿದೆ.

ಫಿಯೋನಾಗೆ ನೀವು ನೆರವಾಗುವುದಾದರೆ…

ಫಿಯೋನಾ ಚಿಕಿತ್ಸೆಗೆ ಧನಸಹಾಯ ಮಾಡಲು ಬಯಸುವವರು ಫಿಯೋನಾ ಜೀವಿತಾ ಮಸ್ಕರೇನಸ್ ಅವರ ಉಪ್ಪೂರಿನ ಕೆನರಾ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ: 0760108012120, IFSC Code: CNRB0000760 ಹಣ ಜಮೆ ಮಾಡಬಹುದು.

No Comments

Leave A Comment