ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಬಲವಂತವಾಗಿ ಸೀರೆ, ಬ್ಲೌಸ್ ಬಿಚ್ಚಿಸಿ ದೌರ್ಜನ್ಯ: ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ಪ್ರಜ್ವಲ್ ರೇವಣ್ಣ ಕರ್ಮಕಾಂಡ

ಬೆಂಗಳೂರು, ಸೆಪ್ಟೆಂಬರ್ 11: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದು, ಇದೀಗ ಅದರಲ್ಲಿ ಏನೇನು ಉಲ್ಲೇಖವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಸುಮಾರು 1632 ಪುಟಗಳ ಚಾರ್ಜ್​ಶೀಟ್​ನಲ್ಲಿ 113 ಸಾಕ್ಷಿಗಳನ್ನು ಎಸ್​​ಐಟಿ ಉಲ್ಲೇಖಿಸಿದೆ. ಇಷ್ಟೇ ಅಲ್ಲದೆ, ಪ್ರಜ್ವಲ್ ದೌರ್ಜನ್ಯ ಯಾವ ರೀತಿ ಇತ್ತು ಎಂಬುದನ್ನು ವಿವರಿಸಲಾಗಿದೆ.

ಬನ್ನಿಕೋಡ ತೋಟದ ಮನೆಯಲ್ಲಿ ಕುಡಿಯಲು ಒಂದು ಚೊಂಬು ನೀರು ತೆಗೆದುಕೊಂಡು ಬಾ ಎಂದು ಹೇಳಿದ್ದ ಪ್ರಜ್ವಲ್, ಮಹಿಳೆ ನೀರು ತೆಗೆದುಕೊಂಡು ಕೊಠಡಿ ಒಳಗೆ ಹೋಗುತ್ತಿದ್ದಂತೆ ಬಾಗಿಲ ಚಿಲಕ ಲಾಕ್ ಮಾಡಿದ್ದ. ನಂತರ, ಮಹಿಳೆ ಬಾಗಿಲು ತೆಗೆಯಣ್ಣ ಎಂದು ಗೋಗರೆದರೂ ಬಿಡದೆ ದೌರ್ಜನ್ಯ ಎಸಗಿದ್ದಾನೆ. ‘ಸೀರೆ ಮತ್ತು ಬ್ಲೌಸ್ ತೆಗೆಯೇ ತೆಗಿ, ತೆಗೆಯಮ್ಮ’ ಎಂದು ಬಲವಂತ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂದು ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಬಲವಂತವಾಗಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಲ್ಲದೆ, ಅದರ ವೀಡಿಯೊವನ್ನೂ ಮಾಡಿಕೊಂಡಿದ್ದ. ಇದಾದ ಬಳಿಕ ಬಸವನಗುಡಿಯ ಮನೆ ಕ್ಲೀನ್​​ಗೆ ಬಂದಾಗ ಸಹ ಇದೇ ರೀತಿಯ ವರ್ತನೆ ತೋರಿದ್ದ. ಬಟ್ಟೆ ಒಗೆಯಲು ತೆಗೆದುಕೊಂಡು ಹೋಗು ಎಂದು ಕೊಠಡಿಗೆ ಕರೆದಿದ್ದ ಪ್ರಜ್ವಲ್, ಮಹಿಳೆ ಕೊಠಡಿಯೊಳಕ್ಕೆ ಹೋಗಲು ಹಿಂಜರಿದಾಗ ಗದರಿದ್ದ. ರೂಂ ಒಳಗೆ ಹೋಗ್ತಿದ್ದಂತೆ ಚಿಲಕ ಹಾಕಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ದೂರಿದ್ದಾರೆ ಎಂಬುದಾಗಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಬೆದರಿಕೆ ಹಾಕಿ, ಬ್ಲ್ಯಾಕ್​ಮೇಲ್ ಮಾಡಿದ್ದ ಪ್ರಜ್ವಲ್

ಅತ್ಯಾಚಾರ ಎಸಗಿದ ನಂತರ, ಹೊರಗಡೆ ಈ ವಿಚಾರ ಬಾಯಿಬಿಟ್ಟರೆ ವೀಡಿಯೊವನ್ನು ನಿನ್ನ ಮಗನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್​ಮೇಲ್ ಮಾಡಿದ್ದ ಎಂದು ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಸಂಸದ ಎಂಬ ಭಯದಲ್ಲಿ ಮಹಿಳೆ ಸುಮ್ಮನಾಗಿದ್ದರು.

‘ನಿನ್ನ ತಾತ, ತಂದೆಗೆ ಊಟ ಹಾಕಿದ್ದೀನಿ. ದಯಮಾಡಿ ಬಿಟ್ಟುಬಿಡಪ್ಪ’ ಎಂದು ಮಹಿಳೆ ಗೋಗರೆದರೂ ಬಿಡದೆ ಪ್ರಜ್ವಲ್ ಮೃಗೀಯವಾಗಿ ವರ್ತಿಸಿದ್ದ ಎಂದು ಹೇಳಲಾಗಿದೆ.

ಪ್ರಜ್ವಲ್​ಗೆ ಸಂಕಷ್ಟ ತಂದೊಡ್ಡಲಿದೆ ಸಂತ್ರಸ್ತೆಯರ ಸೀರೆ!

ಸಂತ್ರಸ್ತೆಯರ ಸೀರೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿದೆ. ಸೀರೆಯಲ್ಲಿ ಪತ್ತೆಯಾಗಿರುವ ವೀರ್ಯ ಯಾರದ್ದು? ಅತ್ಯಾಚಾರ ಸಂದರ್ಭದಲ್ಲಿ ವೀರ್ಯ ಸೀರೆ ಮೇಲೆ ಬಿದ್ದಿತ್ತೇ ಎಂಬುದನ್ನು ಖಾತರಿ ಮಾಡಿಕೊಳ್ಳಲು ಪ್ರಜ್ವಲ್ ಡಿಎನ್​​ಎ ಪರೀಕ್ಷೆ ನಡೆಸಲಾಗಿದೆ. ಎಫ್​​​ಎಸ್​​ಎಲ್​ನಿಂದ ಡಿಎನ್ಎ ವರದಿಗಾಗಿ ಕಾಯಲಾಗುತ್ತಿದೆ. ಸೀರೆ ಮೇಲೆ ಪತ್ತೆಯಾಗಿರುವ ವೀರ್ಯ ಪ್ರಜ್ವಲ್​ಗೆ ಮ್ಯಾಚ್ ಆದ್ರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

kiniudupi@rediffmail.com

No Comments

Leave A Comment