IPL Mega Auction 2025: ದಾಖಲೆಯ 27 ಕೋಟಿಗೆ ಪಂತ್, ಶ್ರೇಯಸ್ ಅಯ್ಯರ್ ಗೆ 26.75 ಕೋಟಿ. ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತ....ರೇಣುಕಾಸ್ವಾಮಿ ಹತ್ಯೆ ಪ್ರಕರಣ: 1200 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ, ದರ್ಶನ್ಗೆ ಹೆಚ್ಚಿದ ಸಂಕಷ್ಟ...
AFG vs NZ: 16 ವರ್ಷಗಳ ಬಳಿಕ ಟೆಸ್ಟ್ನಲ್ಲಿ ಮೂರು ದಿನದಾಟಗಳು ರದ್ದು
ಅಫ್ಘಾನಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ಸಂಪೂರ್ಣ ರದ್ದಾಗಿದೆ. ಭಾರತದ ಗ್ರೇಟರ್ ನೋಯ್ಡಾದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆಯಬೇಕಿದ್ದ ಮೊದಲ ದಿನದಾಟವು ಮಳೆಯ ಕಾರಣ ಸಂಪೂರ್ಣ ರದ್ದಾಗಿತ್ತು. ಇನ್ನು ಮೈದಾನವು ಸಂಪೂರ್ಣ ಒದ್ದೆಯಾಗಿದ್ದ ಕಾರಣ ದ್ವಿತೀಯ ದಿನದಾಟದಲ್ಲಿ ಪಂದ್ಯ ನಡೆದಿರಲಿಲ್ಲ. ಇನ್ನು ಮೂರನೇ ದಿನದಾಟದಲ್ಲಿ ಪಂದ್ಯ ಶುರುವಾಗುವ ನಿರೀಕ್ಷೆಯಿತ್ತು. ಆದರೆ ಮಂಗಳವಾರ ರಾತ್ರಿ ಸುರಿದ ಭಾರೀ ವರ್ಷಧಾರೆಯಿಂದಾಗಿ ಮೂರನೇ ದಿನದಾಟವು ಮಳೆಗೆ ಅಹುತಿಯಾಗಿದೆ.
16 ವರ್ಷಗಳ ಬಳಿಕ 3 ದಿನದಾಟಗಳು ರದ್ದು:
ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಹೀಗೆ ಮೂರು ದಿನದಾಟಗಳು ರದ್ದಾಗಿರುವುದು ತುಂಬಾ ವಿರಳ. ಅದರಲ್ಲೂ ಇಂತಹದೊಂದು ರದ್ದತಿ ನೋಡಿ 16 ವರ್ಷಗಳ ಕಳೆದಿದ್ದವು. ಅಂದರೆ ಕೊನೆಯ ಬಾರಿ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ಸಂಪೂರ್ಣ ರದ್ದಾಗಿರುವುದು 2008 ರಲ್ಲಿ. ಕಾಕತಾಳೀಯ ಎಂಬಂತೆ ಅಂದು ಸಹ ನ್ಯೂಝಿಲೆಂಡ್ ತಂಡ ಕಣದಲ್ಲಿತ್ತು.
2008 ರಲ್ಲಿ ಮೀರ್ಪುರ್ನಲ್ಲಿ ನಡೆದಿದ್ದ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ಮಳೆಗೆ ಅಹುತಿಯಾಗಿತ್ತು. ಇದೀಗ 16 ವರ್ಷಗಳ ಬಳಿಕ ನ್ಯೂಝಿಲೆಂಡ್ ಹಾಗೂ ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ರದ್ದಾಗಿದೆ.
ಪಂದ್ಯ ಡ್ರಾ ಸಾಧ್ಯತೆ:
ಅಫ್ಘಾನಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯಕ್ಕೆ ಇನ್ನು ಕೇವಲ 2 ದಿನದಾಟಗಳು ಮಾತ್ರ ಬಾಕಿಯಿದೆ. ಗುರುವಾರ ಪಂದ್ಯವನ್ನು ಆಯೋಜಿಸಲು ಸಾಧ್ಯವಾದರೂ 4 ಇನಿಂಗ್ಸ್ಗಳನ್ನಾಡಲು ಅವಕಾಶ ಸಿಗುವ ಸಾಧ್ಯತೆಯಿಲ್ಲ. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.
ನಡೆಯದ ಟಾಸ್ ಪ್ರಕ್ರಿಯೆ:
ಕುತೂಹಲಕಾರಿ ವಿಷಯ ಎಂದರೆ ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ರದ್ದಾದರೂ, ಇನ್ನೂ ಸಹ ಟಾಸ್ ಪ್ರಕ್ರಿಯೆ ನಡೆದಿಲ್ಲ. ಅಂದರೆ ಉಭಯ ತಂಡಗಳ ನಾಯಕರುಗಳು ಮೈದಾನಕ್ಕಿಳಿದು ಟಾಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅವಕಾಶವೇ ಸಿಕ್ಕಿಲ್ಲ. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಟಾಸ್ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.