Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆಗೆ ನೀಡಿರುವ ಡ್ರಗ್ಸ್ ಪೊರೈಕೆಯಾಗಿರುವುದು ಬೆಂಗಳೂರಿನಿಂದ..!

ಉಡುಪಿ: ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಮಾದಕ ದ್ರವ್ಯಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಸಂತ್ರಸ್ತೆಗೆ ನೀಡಲಾಗಿದ್ದ ಡ್ರಗ್ಸ್ ಅನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಇತ್ತೀಚೆಗಷ್ಟೇ ಮತ್ತಿಬ್ಬರು ಆರೋಪಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಗಳನ್ನು ಆಂಧ್ರಪ್ರದೇಶ ಮೂಲದ ಗಿರಿರಾಜು ಜಗಧಾಬಿ (31) ಮತ್ತು ಜಾನ್ ನೊರೊನ್ಹಾ (30) ಎಂದು ಗುರುತಿಸಲಾಗಿದೆ.

ಗಿರಿರಾಜು ಹಾಗೂ ಜಾನ್ ಇಬ್ಬರು ಕೆಲ ವರ್ಷಗಳ ಹಿಂದೆ ಕುವೈತ್ ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ. ಅವರು ಹೇಳಿದ್ದಾರೆ.

ಡ್ರಗ್ಸ್ ಗಾಗಿ ಗಿರಿರಾಜು ಜಾನ್ ನನ್ನು ಸಂಪರ್ಕಿಸಿದ್ದು, ಉಡುಪಿಗೆ ಆಹ್ವಾನಿಸಿದ್ದಾನೆ. ಉಡುಪಿಗೆ ಬಂದ ಜಾನ್ ಶಾಹಿದ್ ನನ್ನು ಪರಿಚಯಿಸಿದ್ದಾನೆ. ಶಾಹಿದ್ ಸ್ಥಳೀಯ ಡ್ರಗ್ಸ್ ಪಡೆಯಲು ಯತ್ನಿಸಿದ್ದು, ಅದು ಸಾಧ್ಯವಾಗಿಲ್ಲ. ನಂತರ ಅಭಯ್ ನನ್ನು ಸಂಪರ್ಕಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅಭಯ್, ನಗರದಲ್ಲಿ ಡ್ರಗ್ಸ್ ಲಭ್ಯವಿರುವುದನ್ನು ದೃಢಪಡಿಸಿ, ಶಾಹಿದ್ ಮತ್ತು ಗಿರಿರಾಜುಗೆ ಸ್ಥಳದ ಮಾಹಿತಿ ನೀಡಿದ್ದಾನೆ.

ಬಳಿಕ ಶಾಹಿತ್, ಅಲ್ತಾಫ್ ಹಾಗೂ ಅಭಯ್ ಮೂವರೂ ಬೆಂಗಳೂರಿನಲ್ಲಿ ಡ್ರಗ್ಸ ಖರೀದಿ ಮಾಡಿದ್ದಾರೆ. ಬಳಿಕ ಮೂವರು ಒಂದೊಂದು ಭಾಗದಂತೆ ಡ್ರಗ್ಸ್ ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಅಲ್ತಾಫ್ ಬಳಿಯಿದ್ದ ಡ್ರಗ್ಸ್ ನ್ನು ಸಂತ್ರಸ್ತೆಗೆ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದ್ದು, ಕಾರಿನಿಂದಲೂ ಕೆಲ ಡ್ರಗ್ಸ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಸಂಬಂಧ ಈವರೆಗೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ವ್ಯಕ್ತಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಎಸ್ಪಿ. ಅರುಣ್ ತಿಳಿಸಿದ್ದಾರೆ.

No Comments

Leave A Comment