ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಠಾಣೆಯನ್ನೇ ಡ್ಯಾನ್ಸ್ ಕ್ಲಬ್ ಮಾಡಿದ ಪೊಲೀಸರು; ವಿಡಿಯೋ ವೈರಲ್

ಕಾನ್‌ಸ್ಟೆಬಲ್ ಮತ್ತು ಮಹಿಳಾ ಪೊಲೀಸ್ ಪೇದೆ ಠಾಣೆಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು “ಠಾಣೆಯನ್ನೇ ಡ್ಯಾನ್ಸ್ ಕ್ಲಬ್ ಮಾಡಿಕೊಂಡಿದ್ದೀರಿ” ಕಾಮೆಂಟ್​ ನಲ್ಲಿ ಬರೆದುಕೊಂಡಿದ್ದಾರೆ.

rohit_mastana_12 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಭಾರೀ ವೈರಲ್​ ಆಗಿದೆ. ಆಗಸ್ಟ್​​ 23ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಹಂಚಿಕೊಂಡ ಕೇವಲ ಒಂದೇ ವಾರದಲ್ಲಿ 43.1 ಮಿಲಿಯನ್​​ ಅಂದರೆ 4 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ವಿಡಿಯೋ ವಿಡಿಯೋ ಕೋಟಿ ಕೋಟಿ ವೀಕ್ಷಣೆ ಪಡೆಯುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಕೆಲವರು ಇದು ನಕಲಿ ಪೊಲೀಸರು ಎಂದು ಕಾಮೆಂಟ್​​ ಮಾಡಿದರೆ, ಇನ್ನೂ ಕೆಲವರು ಪೊಲೀಸರು ಯಾವುದೇ ಒತ್ತಡವಿಲ್ಲದೆ ಖುಷಿಯಿಂದ ಕುಣಿದಾಡುತ್ತಿರುವುದು ನೋಡುವುದೇ ಚೆಂದ ಎಂದು ಬರೆದುಕೊಂಡಿದ್ದಾರೆ.

kiniudupi@rediffmail.com

No Comments

Leave A Comment