Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿಯಿಂದ ಆರ್ಥಿಕ ಸಂಕಷ್ಟ-ಸಚಿವರು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಇಲ್ಲ

ಹಿಮಾಚಲ ಪ್ರದೇಶ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನಲೆ ಇದೀಗ ಎಲ್ಲಾ ರಾಜ್ಯ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್‌ ಸಿಂಗ್ ಸುಖು ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯವು ಉತ್ತಮ ಸುಧಾರಣೆ ಕಾಣಬೇಕಿದೆ. ಆದ್ದರಿಂದ ಮುಂದಿನ 2 ತಿಂಗಳು ಯಾವುದೇ ಸಂಬಳ, ಟಿಎ, ಡಿಎ ತೆಗೆದುಕೊಳ್ಳುವುದಿಲ್ಲ ಅಂತ ಸಂಪುಟದ ಎಲ್ಲಾ ಸದಸ್ಯರು ನಿರ್ಧಸಿರುವುದಾಗಿ ಸಿಎಂ ತಿಳಿಸಿದ್ದಾರೆ.

ಅಲ್ಲದೇ ವೇತನ ಉಳಿತಾಯವು ಒಂದು ಸಣ್ಣ ಮೊತ್ತವಾಗಿದೆ. ಇದರ ಹೊರತಾಗಿ ಎಲ್ಲಾ ಶಾಸಕರು ಸಹ ಕೊಡುಗೆ ನೀಡಬೇಕೆಂದು ನಾನು ವಿನಂತಿಸುತ್ತೇನೆ ಎಂದೂ ಸಹ ಅವರು ಮನವಿ ಮಾಡಿದ್ದಾರೆ.

ಹಳೆಯ ಪಿಂಚಣಿ ಯೋಜನೆ , ಮಹಿಳೆಯರಿಗೆ 1,500 ರೂ. ಪಾವತಿಸುವ ಗ್ಯಾರಂಟಿ ಯೋಜನೆ, ಉಚಿತ ವಿದ್ಯುತ್ ಈ ಯೋಜನೆಗಳಿಂದಾಗಿ 86,589 ಕೋಟಿ ರೂ. ಸಾಲದ ಹೊರೆಯಾಗಿದೆ ಎಂದು ವರದಿಯಾಗಿದೆ.

No Comments

Leave A Comment