ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ವತಿಯಿಂದ ಜಿ ವಿ ಅಶೋಕ್ ರವರಿಗೆ ಸನ್ಮಾನ
ಉಡುಪಿ ಆಗಸ್ಟ್ 28 ರಂದು ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ಮಾಸಿಕಸಭೆಯು ಶ್ರೀ ಪ್ರದೀಪ ಭಕ್ತ ರವರ ಅಧ್ಯಕ್ಷತೆಯಲ್ಲಿ ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ ಜರಗಿತು.ಶ್ರೀ ಯೋಗೇಶ್ ಭಟ್ ಹಾಗು ಶ್ರೀ ಮೋಹದಾಸ ನಾಯಕ್ ಮತ್ತು ಸದಸ್ಯರು, ಸಹಸದಸ್ಯರು ಉಪಸ್ಥಿತರಿದ್ದರು.
ಜುಲೈ ತಿಂಗಳಲ್ಲಿ ಇಂದೋರ್ ನಲ್ಲಿ ಜರಗಿದ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ M3, 2024 ನಲ್ಲಿ 5 ಚಿನ್ನ ,1 ಬೆಳ್ಳಿ ಹಾಗು 1 ಕಂಚಿನ ಪದಕಗಳನ್ನು ಗೆದ್ದು ಬೆಸ್ಟ್ ಲಿಫ್ಟರ್ ಆಫ್ ಇಂಡಿಯಾ M3-2024 ಎಂಬ ಕೀರ್ತಿಗೆ ಭಾಜನರಾದ ,ಸದಸ್ಯ ಶ್ರೀ ಜಿ ವಿ ಅಶೋಕ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ಯನ್ನಿತ್ತು ಸನ್ಮಾನಿಸಲಾಯಿತು.
ಶ್ರೀಅಶೋಕ್ ರವರು ತಾನು ಭಾರಎತ್ತುವ ಕ್ರೀಡೆಗೆ ಬರಲು ಕಾರಣಕರ್ತರಾದವರನ್ನು ಹಾಗು ಅವರ ಮಾರ್ಗದರ್ಶನ ವನ್ನೂ ನೆನೆಪಿಸಿಕೊಂಡರು. ತಾನು ವಿದ್ಯಾರ್ಥಿ ಜೀವನದಲ್ಲಿ ಹಾಗು ವೃತ್ತಿಜೀವನದಲ್ಲಿ ಮತ್ತು ನಿವೃತ್ತಿಯ ನಂತರವೂ ನಿರಂತರವಾಗಿ ಈ ಕ್ರೀಡೆಯನ್ನು ಬಹಳ ಆಸಕ್ತಿಇಂದ ಮುಂದುವರಿಸಿಕೊಂಡು ಬಂದು,ಭಾಗವಹಿಸಿದ ಪ್ರತಿಯೊಂದು ಸ್ಪರ್ದೆಯಲ್ಲಿ ಒಂದಿಲ್ಲೊಂದು ಪದಕ ವನ್ನು ಗೆದ್ದುಕೊಂಡ ಬಗೆಯನ್ನು ಬಹಳ ರೋಚಕವಾಗಿ ತಿಳಿಸಿದರು.
ಇವರು ಇದುವರೆಗೆ 28 ಚಿನ್ನ. 48 ಬೆಳ್ಳಿ. 36 ಕಂಚು ಹೀಗೆ ಒಟ್ಟು 104 ಪದಕಗಳನ್ನು ಗೆದ್ದಿರುತ್ತಾ ರೆ.64ವಯಸ್ಸಿನ ಅಶೋಕ್ ರವರ ಪದಕಗಳನ್ನು ಗೆಲ್ಲುವ ಉತ್ಸಾಹ ಇನ್ನು ಕುಂದಿಲ್ಲ. ಇವರ ಸಾಧನೆ ನಮ್ಮ ಯುವಕರಿಗೆ ಉತ್ತಮ ಸ್ಪೂರ್ತಿ ಯಾಗಿದೆ.
ನಂತರ ಭಾರತೀಯ ನಾಣ್ಯ ಪರಂಪರೆ ಬಗ್ಗೆ ಸದಸ್ಯರಾದ ಶ್ರೀ ಸುಧಾಕರ ಭಟ್ ಅವರು ಉಪನ್ಯಾಸ ವನ್ನಿತ್ತ ರು.ನಮ್ಮದೇಶದಲ್ಲಿ ಬೇರೆಬೇರೆ ರಾಜರ ಆಳ್ವಿಕೆಯಲ್ಲಿ ನಾಣ್ಯಗಳು ಆರಂಭ ಗೊಂಡು ಇಲ್ಲಿಯವರೆಗಿನ ಇತಿಹಾಸವನ್ನು ಪ್ರಸ್ತುತ ಪಡಿಸಿದರು. ಹಾಗು ನಾಣ್ಯ ಗಳ ಸಂಗ್ರಹಣೆ ಅವುಗಳನ್ನು ವ್ಯವಸ್ಥಿತ ವಾಗಿ ಜೋಡಿಸುವ ಪರಿಯನ್ನು ತಿಳಿಸಿದರು.ಮಾತ್ರವಲ್ಲದೆ ನಾಣ್ಯ ಸಂಗ್ರಹದ ಉಪಯೋಗ ಗಳನ್ನು ತಿಳಿಸುತ್ತಾ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಭಾರತದ ಭವ್ಯ ಇತಿಹಾಸವನ್ನೂ ತಿಳಿಯಲು ಅಸಕ್ತಿ ಉಂಟಾಗುತ್ತದೆ ಎಂದರು. ತಮ್ಮ ಸಂಗ್ರಹದಿಂದ ಕೆಲವು ನಾಣ್ಯಗಳನ್ನು ಪ್ರದರ್ಶಿಸಿದರು.
ಶ್ರೀ ಪ್ರದೀಪ ಭಕ್ತ ರವರು ಅಧ್ಯಕ್ಷೀಯ ಭಾಷಣ ದಲ್ಲಿ ಶ್ರೀ ಅಶೋಕ್ ಅವರ ಅವಿರತ ಸಾಧನೆ ಗಾಗಿ ಕೊಂಡಾಡಿದರು. ಇನ್ನುಮುಂದೆಯೂ ಸಹ ಹೆಚ್ಚಿನ ಪದಕಗಳು ಅವರನ್ನು ಅರಸಿ ಬರಲಿ ಎಂದು ಶುಭ ಹಾರೈಸಿದರು.
ಶ್ರೀ ಸುಧಾಕರ ಭಟ್ ರವರ ನಾಣ್ಯ ಸಂಗ್ರಹದ ಹವ್ಯಾಸ ಮತ್ತು ನಾಣ್ಯಗಳ ಇತಿಹಾಸದ ಬಗೆಗಿನ ಅವರ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಣ್ಯ ಸಂಗ್ರಹ ಉತ್ತಮ ಹವ್ಯಾಸವಾದರೂ ಅತಿಯಾದ ಧನ ಸಂಗ್ರಹ ಮಾತ್ರ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟರು.
ಪ್ರಾರಂಭದಲ್ಲಿ ಶ್ರೀ ಮಾರುತಿ ಪ್ರಭು ರವರು ಸ್ವಾಗತಿಸಿದರು. ಶ್ರೀಮತಿ ಸಂಧ್ಯಾ ರಮೇಶ್ ಅವರು ಶ್ರೀ ಜಿ ವಿ ಅಶೋಕ್ ಹಾಗು ಶ್ರೀ ಸುಧಾಕರ ಭಟ್ ರವರನ್ನು ಪರಿಚಯಿಸಿದರು ಹಾಗು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ಮೋಹನ್ ದಾಸ್ ನಾಯಕ್ ಅವರು ಸಂಘಟನೆಯ ಚಟುವಟಿಕೆ ಗಳ ವರದಿಯನ್ನು ವಾಚಿಸಿದರು.
ಸದಸ್ಯರಾದ ಮಾಯಾ ವಿ ಕಿಣಿ, ಎಂ ಎಸ್ ಕಾಮತ್ ಇವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಯಿತು .ಶ್ರೀ ರಾಧಕೃಷ್ಣ ಅವರು ಧನ್ಯವಾದವಿತ್ತರು.