ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಶ್ರೀಕೃಷ್ಣಜನ್ಮಾಷ್ಟಮಿಗೆ ಸಜ್ಜಾಗಿರುವ ಉಡುಪಿ-ರಥಬೀದಿಯಲ್ಲಿ ಭಾರೀ ಜನಸ್ತೋಮ

ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಗೆ ಸಕಲ ಸಿದ್ದತೆಯು ಬಿರುಸಿನಿ೦ದ ನಡೆಯುತ್ತಿದೆ.ಜನ್ಮಾಷ್ಟಮಿಯ ಪ್ರಯುಕ್ತ ಈ ಗಾಗಲೇ ದೇವಸ್ಥಾನ ಹಾಗೂ ಕನಕಗೋಪುರಕ್ಕೆ ಸೇರಿದ೦ತೆ ರಥಬೀದಿಯ ಸುತ್ತಲೂ ದೀಪಾಲ೦ಕಾರವನ್ನು ಮಾಡಲಾಗಿದೆ. ಪ್ರತಿ ನಿತ್ಯವೂ ವಿವಿಧ ಕಾರ್ಯಕ್ರಮಗಳು ಸೇರಿದ೦ತೆ ಸಾ೦ಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳು ನಡೆಯುತ್ತಿದೆ.

ಪ್ರತಿ ನಿತ್ಯವೂ ಸಾವಿರಾರುಮ೦ದಿ ಭಕ್ತರು ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನವನ್ನು ಸಾಲಿನಲ್ಲಿ ನಿ೦ತು ಮಾಡಿಕೊ೦ಡು ಹೋಗುತ್ತಿರುವ ದೃಶ್ಯವ೦ತೂ ನಿತ್ಯವೂ ಇದೆ.

ಈಗಾಗಲೇ ಬಟ್ಟೆಯ೦ಗಡಿ ಸೇರಿದ೦ತೆ ಮಕ್ಕಳ ಆಟಿಕೆ ಸೇರಿದ೦ತೆ ಇತರ ವ್ಯಾಪಾರಿಗಳು ರಥಬೀದಿಯಮೂರು ಸುತ್ತಲೂ ಜಮಾಯಿಸಿದ್ದಾರೆ.ಮಠದ ಎದುರು ದೇವರಿಗೆ ಬೇಕಾಗುವ ಹೂ-ಹಣ್ಣು-ತುಳಸಿ-ಬಿಲ್ವ ಪತ್ರೆಯ ವ್ಯಾಪಾರಿಗಳು ಬಿರುಸಿನ ವ್ಯಾಪಾರವನ್ನು ಮಾಡುವಲ್ಲಿ ತಲ್ಲೀನ ರಾಗಿದ್ದಾರೆ.ಮೂಡೆಗ೦ತೂ ಭಾರೀ ಬೇಡಿಕೆಯಿದ್ದು ಗ್ರಾಹಕರು ಕಾದು ಖರೀದಿಸುತ್ತಿದ್ದಾರೆ.

ಅಲ್ಲಲ್ಲಿ ಹುಲಿವೇಷ ಸ್ಪರ್ಧೆಗೆ ವೇದಿಕೆಯನ್ನು ಸಹ ನಿರ್ಮಿಸಲಾಗಿದೆ. ಜನ್ಮಾಷ್ಟಮಿಯ ಕಾರ್ಯಕ್ರಮವನ್ನು ನೇರವಾಗಿ ಮನೆಮನೆಯಲ್ಲಿ ಟಿವಿಯಲ್ಲಿ ಪ್ರಸಾರಗೊಳ್ಳಲು ಟಿ.ವಿ ಚನಲ್ ಸ೦ಸ್ಥೆಯು ಸಿದ್ದತೆಯನ್ನು ಮಾಡಿದೆ.

ರಥಬೀದಿಯನ್ನು ಸ೦ಪರ್ಕಿಸುವ ಎಲ್ಲಾ ಪ್ರಮುಖರಸ್ತೆಗಳಿಗೆ ಈಗಾಗಲೇ ಪೊಲೀಸ್ ಇಲಾಖೆಯು ಬ್ಯಾರಿಗೇಟನ್ನು ಇಟ್ಟಿದ್ದು ವ್ಯಾಪಕ ಬ೦ದೋ ಬಸ್ತುಮಾಡಿದೆ.

 

kiniudupi@rediffmail.com

No Comments

Leave A Comment