``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿಯಲ್ಲಿ ವೈಭವದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನ

ಉಡುಪಿ:ಉಡುಪಿಯ ರಥ ಬೀದಿಯಲ್ಲಿರುವ ಶ್ರೀ ಮಂತ್ರಾಲಯ ಮಠದ ಶಾಖಮಠವಾದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಯು ವೈಭವದಿಂದ ಜರುಗಿತು.

ಮಧ್ಯಾಹ್ನದ ಮಹಾಪೂಜೆ ಹಾಗೂ ಪಲ್ಲ ಪೂಜೆಗಳನ್ನು ಪುತ್ತಿಗೆ ಶ್ರೀಗಳು ನರವೇರಿಸಿದರು ಸಂಜೆ ಶ್ರೀ ಕೃಷ್ಣನ ಸುವರ್ಣ ರಥದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವ ಅವತಾರರಾದ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ರಥೋತ್ಸವ ನಡೆಸಿ ಶ್ರೀ ಕೃಷ್ಣನ ಸನ್ನಿಧಿಯ ಮುಂಭಾಗದಲ್ಲಿ ಚಂದ್ರ ಶಾಲೆಯಲ್ಲಿ ವೈಭವದ ಪೂಜೆಗಳನ್ನು ನಡೆಸಲಾಯಿತು ಪರ್ಯಾಯ ಉಭಯ ಶ್ರೀಪಾದರು ಭಂಡಾರಕೆರೆ ಶ್ರೀಗಳು ಉಪಸ್ಥಿತರಿದ್ದರು ರಾಘವೇಂದ್ರ ಸ್ವಾಮಿಗಳು ಉಡುಪಿಯ ಶ್ರೀ ಕೃಷ್ಣನ ಈ ಸನ್ನಿಧಿಯಲ್ಲಿ ಮಂತ್ರಾಲಯ ಮಠದಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಇದ್ದು ಶ್ರೀಕೃಷ್ಣನ ಉಪಾಸನೆ ಮಾಡುತ್ತಾ ಚಂದ್ರಿಕಾಪ್ರಕಾಶ ವೆಂಬ ಉದ್ಗ್ರಂಥ ವನ್ನು ರಚಿಸಿದ್ದರು.

ಶ್ರೀ ಕೃಷ್ಣನ ಸ್ತೋತ್ರವನ್ನು ನಡೆಸಲು ಅವರು ರಚಿಸಿದ ಇಂದು ಎನಗೆ ಗೋವಿಂದ.. . ದೇವರ ನಾಮ ಪ್ರಸಿದ್ಧ. ಶ್ರೀ ಕೃಷ್ಣನ ಪ್ರತಿರೂಪವಾದ ಸುವರ್ಣ ಪ್ರತಿಮೆಯನ್ನು ಸ್ವಯಂ ನಿರ್ಮಿಸಿ ಶ್ರೀಮಠದಲ್ಲಿ ಇಂದು ಗುರುಪರಂಪರೆಯಿಂದ ಪೂಜಿತವಾಗಿರುವ ವಿಚಾರಗಳನ್ನೆಲ್ಲ ಸ್ಮರಿಸಿದ ಪರ್ಯಾಯ ಶ್ರೀಪಾದರು ಮುಂಬರುವ ವರ್ಷದಲ್ಲಿ ಮಂತ್ರಾಲಯ ಶ್ರೀಪಾದರಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ತೀರ್ಥ ಶ್ರೀಪಾದರ ಸಹಯೋಗದಲ್ಲಿ ಉಡುಪಿಯ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಪ್ರತಿಷ್ಠೆಯ ಶತಮಾನೋತ್ಸವವನ್ನು ವೈಭವದಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ಪರ್ಯಾಯಮಠದ ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತರಿದ್ದರು ಉಡುಪಿ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಶ್ರೀ ಜಯತೀರ್ಥ ಆಚಾರ್ಯ ಶ್ರೀ ರಾಘವೇಂದ್ರ ಮಠದ ಗೌರವವನ್ನು ಪರ್ಯಾಯ ಶ್ರೀಪಾದದ್ವಯರಿಗೆ ಸಲ್ಲಿಸಿದರು

 

No Comments

Leave A Comment