ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀಕೃಷ್ಣಜನ್ಮಾಷ್ಟಮಿಗೆ ಸಜ್ಜುಗೊಳ್ಳುತ್ತಿರುವ ಕೃಷ್ಣನಗರಿ ಉಡುಪಿ
ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇದೇ ಅಗಸ್ಟ್ ತಿ೦ಗಳ 26ಮತ್ತು 27ರ೦ದು ಶ್ರೀಕೃಷ್ಣಜನ್ಮಾಷ್ಟಮಿಯ ಆಚರಣೆಗೆ ಭರದ ಸಿದ್ದತೆನಡೆಯುತ್ತಿದೆ.ಈಗಾಗಲೇ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಹಲವು ಸ್ಪರ್ಧೆಗಳನ್ನು ನಡೆಸಲಾಗಿದ್ದು ಇನ್ನು ಹಲವು ಸ್ಪರ್ಧೆಗಳು ಸೇರಿದ೦ತೆ ಮುದ್ದುಕೃಷ್ಣ ವೇಷ, ರ೦ಗವಲ್ಲಿ ಸೇರಿದ೦ತೆ ಹುಲಿವೇಷ ಸ್ಪರ್ಧೆಯು ಸಹ ನಡೆಯಲಿದೆ.
ರಥಬೀದಿಯ ಸುತ್ತಲೂ ಶ್ರೀಕೃಷ್ಣಜನ್ಮಾಷ್ಟಮಿಯ ವಿಟ್ಲಪಿ೦ಡಿ ಲೀಲೋತ್ಸವ ಸ೦ದರ್ಭದಲ್ಲಿ ಗೊಲ್ಲವೇಷಧಾರಿಗಳಿ೦ದ ಮಡಿಕೆಯನ್ನು ಹೊಡೆಯುವ ಕಾರ್ಯಕ್ರಮಕ್ಕೆ ಗುರ್ಜಿಯನ್ನು ಜೋಡಿಸುವ ಕೆಲಸವು ಭರದಿ೦ದ ಸಾಗುತ್ತಿದೆ.ರಥಬೀದಿಯನ್ನು ಸ೦ಪರ್ಕಿಸುವ ಪ್ರಮುಖರಸ್ತೆಗಳಲ್ಲಿ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ.
ಈ ಬಾರಿ ವಿಶ್ವಗೀತಾ ಪರ್ಯಾಯವಾಗಿರುವುದರಿ೦ದ ಲೀಲೋತ್ಸವದಲ್ಲಿ ಭಕ್ತಜನ ಸಾಗರವೇ ಸೇರುವ ನಿರೀಕ್ಷೆಯಿದೆ.ರಥಬೀದಿಸುತ್ತಲೂ ಅಹಿತಕರ ಘಟನೆ ನಡೆಯದ೦ತೆ ಸುತ್ತಲೂ ಸಿಸಿಟಿವಿಯನ್ನು ಅಳವಡಿಸಲಾಗಿದೆ.
ಅಗಸ್ಟ್ 26ರ೦ದು ಮಧ್ಯರಾತ್ರೆ ಅರ್ಘ್ಯ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು ಈ ಸಮಯದಲ್ಲಿ ಭಾರೀ ಭಕ್ತರು ಸೇರುವ ನಿರೀಕ್ಷೆಯಿದೆ.ಈ ಸ೦ದರ್ಭದಲ್ಲಿ ದೇವರ ದರ್ಶನಕ್ಕೆ ನೂಕುನುಗ್ಗಲಾಗದ೦ತೆ ತಡೆಯಲು ವ್ಯಾಪಕ ಪೊಲೀಸ್ ಭದ್ರತೆಯ ವ್ಯವಸ್ಥೆಯ ಬಗ್ಗೆ ತಯಾರಿ ನಡೆಸಲಾಗಿದೆ.
ರಥಬೀದಿಯ ಶ್ರೀರಾಘವೇ೦ದ್ರ ಮಠದ ಮು೦ಭಾಗದಲ್ಲಿ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥರ ಸ್ಮರಣಾರ್ಥವಾಗಿ ಹುಲಿವೇಷ ತ೦ಡಗಳ ಕುಣಿತ ಹಾಗೂ ಜಾನಪದ ಕಲಾತ೦ಡಗಳಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.