ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಸಿದ್ದರಾಮಯ್ಯನವರ ವಿರುದ್ಧಪ್ರಾಸಿಕ್ಯೂಷನ್ಗೆ ಅವಕಾಶ ನೀಡಿ ಕೇಂದ್ರ ಬಿಜೆಪಿ ನಾಯಕರ ಋಣ ತೀರಿಸಿದ ರಾಜ್ಯಪಾಲರು ಸುರೇಶಶೆಟ್ಟಿ ಬನ್ನಂಜೆ

ನಮ್ಮ ರಾಜ್ಯದ ರಾಜ್ಯಪಾಲರಿಂದ ಲೇ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ ನಮ್ಮ ರಾಜ್ಯದ ರಾಜ್ಯಪಾಲರು ತಾವು ರಾಜ್ಯಪಾಲರು ಎಂಬುದನ್ನು ಮರೆತು ನಮ್ಮ ರಾಜ್ಯ ಸರ್ಕಾರದ ವಿರೋಧಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ ರಾಜ್ಯದ ರಾಜ ಭವನವನ್ನು ಬೀದಿಗೆ ತಂದು ನಿಲ್ಲಿಸಿ ರಾಜ ಭವನದ ಘನತೆಯನ್ನು ಕುಗ್ಗಿಸಿರುತ್ತಾರೆ ಬಿಜೆಪಿ ನಾಯಕರ ಕುತಂತ್ರದ ಆಟಕ್ಕೆ ನಮ್ಮ ರಾಜ್ಯದ ರಾಜ್ಯ ಭವನ ಬಲಿ ಆಗುತ್ತಿರುವುದು ನಮ್ಮ ರಾಜ್ಯದ ದುರಾದೃಷ್ಟ ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ಆಡಳಿತವನ್ನು ನಮ್ಮ ಸರಕಾರ ಜನರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ನೋಡಿ ಸಹಿಸಲಾಗದೆ ಯಶಸ್ವಿ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರ ಆಡಳಿತ ಕಂಡು ಕಂಗಾಲದ ಕೇಂದ್ರದ ಬಿಜೆಪಿ ನಾಯಕರು ರಾಜ್ಯಪಾಲರ ಮುಖಿನ ನಮ್ಮ ಬಹುಮತ ಉಳ್ಳ ಕಾಂಗ್ರೆಸ್ ಪಕ್ಷದ ಸರಕಾರವನ್ನು ಉರು ಳಿಸಲುಯತ್ನಿಸುತ್ತಿದ್ದಾರೆ. ಭ್ರಷ್ಟಾಚಾರದ ಪಿತಾಮಹ ಎನಿಸಿಕೊಂಡ ಜೈ ಶ್ರೀರಾಮ್ ಎಂದು ನಕಲಿ ಪರಶುರಾಮನ ಮೂರ್ತಿಯನ್ನು ಸೃಷ್ಟಿಸಿದ ಮಾಜಿ ಸಚಿವ ಸುನಿಲ್ ಕುಮಾರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕತೆ ಇದೆಯ. ತಮ್ಮ 5 ವರ್ಷದ ಆಡಳಿತದಲ್ಲಿ ಈ ಹಿಂದೆ 40 ಶೇಕಡಾ ಕಮಿಷ ನ್ ನುಂಗಿ ಕೊಬ್ಬಿದ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯ. ನಮ್ಮ ನಾಯಕರ ಹಿಂದೆ ಕೋಟ್ಯಾಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದಾರೆ ಎಂಬುದನ್ನು ಈ ಬಿಜೆಪಿಯ ನಾಯಕರುಗಳುಮೊದಲು ತಿಳಿಯಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ  ಸುರೇಶ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ

No Comments

Leave A Comment