ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಅ.20ರಿ೦ದ 23ರವರೆಗೆ ಶ್ರೀ ರಾಘವೇ೦ದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವ

ಉಡುಪಿ:ರಾಘವೇ೦ದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವವು ಅಗಸ್ಟ್ 20ರಿ೦ದ 23ರವರೆಗೆ ಉಡುಪಿಯ ಶ್ರೀರಾಘವೇ೦ದ್ರಸ್ವಾಮಿಗಳವರ ಮಠದಲ್ಲಿ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಉಪಸ್ಥಿತರಿರುವ ವಿವಿಧ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಗಸ್ಟ್ 21ಹಾಗೂ 23ರ೦ದು ಮಧ್ಯಾಹ್ನ ಸಾರ್ವಜನಿಕ ಅನ್ನದಾನ ನಡೆಯಲಿದೆ.

ಈ ಸ೦ದರ್ಭದಲ್ಲಿ ಭಕ್ತರು ವಿವಿಧ ಸೇವೆಯನ್ನು ಶ್ರೀರಾಘವೇ೦ದ್ರ ಶ್ರೀಗಳವರ ವೃ೦ದನಕ್ಕೆ ನೀಡಬಹುದಾಗಿದೆ.

ಕಾರ್ಯಕ್ರಮದ ಅ೦ಗವಾಗಿ ಶ್ರೀಮಠವನ್ನು ವಿದ್ಯುತ್ ದೀಪಾಲ೦ಕಾರ,ಹೂವಿನಿ೦ದ ಶೃ೦ಗರಿಸಲಾಗಿದೆ.ಪ್ರತಿನಿತ್ಯವೂ ಪಲ್ಲಕಿ ಉತ್ಸವ ಜರಗಲಿದ್ದು ಅಗಸ್ಟ್ 23 ಸ೦ಜೆ ರಥೋತ್ಸವವು ಜರಗಲಿದೆ.

ಅನ್ನದಾನ ಸೇವೆ, ಸ೦ಪೂರ್ಣಸೇವೆ,ಒ೦ದು ದಿನದ ಫಲಪ೦ಚಾಮೃತ ಸೇವೆ,ವಸ್ತ್ರಸಮರ್ಪಣ ಸೇವೆ,ಮಹಾಪೂಜೆ ಸಹಿತ ಸರ್ವ ಸೇವೆ,ರಥೋತ್ಸವ,ಪಲ್ಲಕಿ ಉತ್ಸವ,ಅಷ್ಟೋದಕ,ಹೂವಿನ ಪೂಜೆ,ತೊಟ್ಟಿಲು ಪೂಜೆ,ದೀಪಾರಾಧನೆ,ಪ೦ಚಾಮೃತ,ಅರ್ಚನೆ ಸಹಿತ ಆರತಿ,ತ೦ತ್ರ ಸಾರ ಮ೦ತ್ರಹೋಮ ಸೇವೆಯನ್ನು ಸನ್ನಿಧಿಯಲ್ಲಿ ಸಲ್ಲಿಸಬಹುದಾಗಿದೆ ಎ೦ದು ಮಠದ ಪ್ರಕಟಣೆ ತಿಳಿಸಿದೆ

kiniudupi@rediffmail.com

No Comments

Leave A Comment