ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಶ್ರೀಲಕ್ಷ್ಮೀವೆ೯ಕಟೇಶ ದೇವಸ್ಥಾನದ 124ನೇ ಭಜನಾ ಸಪ್ತಾಹ ಮಹೋತ್ಸವದ ಕೊನೆಯ 7ನೇ ಕಕಾಡರತಿ ಸ೦ಪನ್ನ-ಭಾರೀ ಭಕ್ತ ಜನಸ್ತೋಮ
ಉಡುಪಿ ಶ್ರೀಲಕ್ಷ್ಮೀವೆ೯ಕಟೇಶ ದೇವಸ್ಥಾನದ 124ನೇ ಭಜನಾ ಸಪ್ತಾಹ ಮಹೋತ್ಸವದ ಕೊನೆಯ 7ನೇ ಕಕಾಡರತಿ ಕಾರ್ಯಕ್ರಮವು ಇ೦ದು ಶನಿವಾರದ೦ದು ಮು೦ಜಾನೆ ಭಾರೀ ಭಕ್ತ ಜನಸ್ತೋಮದ ನಡುವೆ ಗೌಳಿಣ್ಯಾ ಸ೦ಕೀರ್ತನೆಯೊ೦ದಿಗೆ ಸ೦ಪನ್ನ ಗೊ೦ಡಿತು.
ದೇವಸ್ಥಾನ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು 7ದಿನಗಳ ಕಾಲದ ಪ್ರತಿ ನಿತ್ಯವೂ ಕಕಾಡರತಿಯನ್ನು ಶ್ರೀವಿಠೋಬರಖುಮಾಯಿ ದೇವರಿಗೆ ಬೆಳಗಿದರು.ಭಾರೀ ಭಕ್ತ ಜನರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಸ೦ಪನ್ನ ಗೊ೦ಡಿತು.