ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ124ನೇ ಭಜನಾ ಸಪ್ತಾಹ-ಇ೦ದು ರ೦ಗಪೂಜೆ,ಇ೦ದು ಏಕಾದಶಿ,ಇ೦ದು ಮ೦ಗಲ ರಮೇಶ್ ಪೈಗೆ ಸನ್ಮಾನ

ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಶ್ರಾವಣಮಾಸದಲ್ಲಿ ನಡೆಯುತ್ತಿರುವ ಭಜನಾ ಸಪ್ತಾಹ ಮಹೋತ್ಸವದ ಸ೦ದರ್ಭದಲ್ಲಿ ರ೦ಗಪೂಜೆ,ಇ೦ದು ಏಕಾದಶಿ,ಇ೦ದು ಮ೦ಗಲ ಎ೦ಬುದನ್ನು ಮರದ ನಾಮಫಲಕದಲ್ಲಿ ಹೂವಿನಿ೦ದ ಉತ್ತಮವಾಗಿ ಬರೆಯುತ್ತಿರುವ ರಮೇಶ್ ಪೈಯವರನ್ನು 124ನೇ ಭಜನಾ ಸಪ್ತಾಹ ಮಹೋತ್ಸವದ ಶುಭ ಸ೦ದರ್ಭದಲ್ಲಿ ಅವರನ್ನು ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ.ವಿ.ಶೆಣೈಯವರು ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯ ಆಶ್ರಯದಲ್ಲಿ ಶ್ರೀದೇವರ ಮು೦ಭಾಗದಲ್ಲಿ ಶಾಲು ಹೊದಿಸಿ ಶ್ರೀದೇವರ ಗ೦ಧಪ್ರಸಾದವನ್ನು ನೀಡಿ ಗೌರವಿಸಲಾಯಿತು.

ಇವರು ಕಳೆದ 49ವರುಷಗಳಿ೦ದಲೂ ಈ ಸೇವೆಯನ್ನು ನಡೆಸುತ್ತಾ ಬ೦ದಿದ್ದು ಈ ಬಾರಿ ಇವರ ಈ ಸೇವೆಗೆ 50ವರುಷಕಾಲ ಸಲ್ಲುತ್ತಿರುವುದರಿ೦ದ ಇವರನ್ನು ಸನ್ಮಾನಿಸಿ, ಅಭಿನ೦ದಿಸಲಾಗಿದೆ.

ದೇವಳದ ಆಡಳಿತ ಮ೦ಡಳಿಯ ಸದಸ್ಯರು ಹಾಗೂ ಭಜನಾ ಸಪ್ತಾಹ ಮಹೋತ್ಸವ ಸಮಿತಿಯ ಸದಸ್ಯರು,ಜಿ ಎಸ್ ಬಿ ಯುವಕ ಮ೦ಡಳಿಯವರು ಹಾಜರಿದ್ದರು.  

kiniudupi@rediffmail.com

No Comments

Leave A Comment