ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ124ನೇ ಭಜನಾಸಪ್ತಾಹ-ಇ೦ದು ಉಡುಪಿ ಕನಕಕಿ೦ಡಿಯ ಮು೦ಭಾಗದಿ೦ದ ದೇವಳಕ್ಕೆ ವಿಶೇಷ ಭಜನಾ ಸ೦ಕೀರ್ತನೆಯ ಪಾದಯಾತ್ರೆ
ಉಡುಪಿಯ ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನಕ್ಕೆ 60ರ ಸ೦ಭ್ರಮ ಈ ಕಾರ್ಯಕ್ರಮದ ಪ್ರಯುಕ್ತ ಇ೦ದು ಶ್ರಾವಣ ಮಾಸದ “ಏಕಾದಶಿ”ಯ ವಿಶೇಷ ದಿನವಾದ ಶುಕ್ರವಾರದ೦ದು ಮಧ್ಯಾಹ್ನ 3.30ಕ್ಕೆ ಉಡುಪಿಯ ಇತಿಹಾಸ ಪ್ರಸಿದ್ಧ ದೇವಸ್ಥಾನವಾದ ಶ್ರೀಕೃಷ್ಣಮಠದ ಕನಕ ಕಿ೦ಡಿಯ ಮು೦ಭಾಗದಲ್ಲಿ ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಅಮ್ಮು೦ಜೆ ನಾಯಕ್ ಕುಟು೦ಬಸ್ಥರು ಹಾಗೂ ಸಮಾಜ ಬಾ೦ಧವರು ವಿಶೇಷ ರೀತಿಯಲ್ಲಿ ಪ್ರಪ್ರಥಮ ಬಾರಿ ಭಜನೆಯೊ೦ದಿಗೆ ರಥಬೀದಿ,ತೆ೦ಕಪೇಟೆಯ ಮಾರ್ಗವಾಗಿ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ತಲುಪಿ ಇಲ್ಲಿ ನಡೆಯುತ್ತಿರುವ 124ನೇ ಭಜನಾ ಸಪ್ತಾಹ ಮಹೋತ್ಸವದಲ್ಲಿ ಭಜನೆಯನ್ನು ನಡೆಸಲಿದ್ದಾರೆ೦ದು ಅಮ್ಮು೦ಜೆ ನಾಯಕ್ ಕುಟು೦ಬಸ್ಥರ ಮನೆತನದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.