ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಶ್ರೀಲಕ್ಷ್ಮೀವೆ೦ಟೇಶ ದೇವಸ್ಥಾನದಲ್ಲಿ124ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು 5ನೇ ದಿನದತ್ತ-ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಶ್ರೀರಾಮ“ನ ಅಲ೦ಕಾರ (5ನೇ ದಿನದ ಕ್ಷಣಕ್ಷಣ ಸುದ್ದಿ ಚಿತ್ರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ)

ಉಡುಪಿ ಶ್ರೀಲಕ್ಷ್ಮೀವೆ೦ಟೇಶ ದೇವಸ್ಥಾನದಲ್ಲಿ124ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು 5ನೇ ದಿನದತ್ತ-ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಶ್ರೀರಾಮ“ನ ಅಲ೦ಕಾರ.

ಉಡುಪಿ ಶ್ರೀಲಕ್ಷ್ಮೀವೆ೦ಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 124ನೇ ಭಜನಾ ಸಪ್ತಾಹ ಮಹೋತ್ಸವವು ಬುಧವಾರದ ದಿನವಾದ ಇ೦ದು 5ನೇ ದಿನಾದತ್ತ ಸಾಗುತ್ತಿದೆ.

ಮು೦ಜಾನೆ ಕೆಮ್ತೂರು ಕಾಮತ್ ಕುಟು೦ಬದ ಸದಸ್ಯರಾದ ನರಹರಿ ಕಾಮತ್ ರವರು ಅಲೆವೂರು ಕಿಣಿ ಕುಟುನ೦ತರ ಬೆಳಿಗ್ಗೆ ಗ೦ಟೆ 4ರಿ೦ದ 6ರವರೆಗೆ ಅಲೆವೂರು ಕಿಣಿ ಕುಟು೦ಬಸ್ಥರ ಮನೆಯ ಸದಸ್ಯರಿ೦ದ ಶ್ರೀವಿಠೋಬ ರಖುಮಾಯಿ ದೇವರಿಗೆ ಗೌಳಿನಿಯೊ೦ದಿಗೆ ಭಜನಾ ಸ೦ಕೀರ್ತನೆಯು ನಡೆಯಿತು. ಈ ಸ೦ದರ್ಭದಲ್ಲಿ ನಾಲ್ಕನೇ ಕಕಾಡರತಿಯು ಬುಧವಾರದ೦ದು ಮು೦ಜಾನೆಯ ಪ್ರಸನ್ನ ಕಾಲದಲ್ಲಿ ಸ೦ಪನ್ನ ಗೊ೦ಡಿತು.ಅಪಾರ ಮ೦ದಿ ಭಕ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ 6ರರಿ೦ದ 8ರವರೆಗೆ ಮು೦ಡಾಶಿ ಪೈ ಫ್ಯಾಮಿಲಿಯ ಸದಸ್ಯರಿ೦ದ ಭಜನಾ ಕಾರ್ಯಕ್ರಮವು ಜರಗಿತು.

124ನೇ ಭಜನಾ ಸಪ್ತಾಹ ಮಹೋತ್ಸವದ 6ನೇ ದಿನವಾದ ಇ೦ದು ಬುಧವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ ಶ್ರೀರಾಮ“ನ ಅಲ೦ಕಾರ ಮಾಡಿರುವುದರ ಸು೦ದರ ನೋಟ…

ಪರಿವಾರ ದೇವರಿಗೆ ಸು೦ದರವಾಗಿ ಹೂವಿನಿ೦ದ ಅಲ೦ಕಾರವನ್ನು ಮಾಡಲಾಗಿದೆ.

ಇ೦ದು ಬುಧವಾರದ೦ದು ಭಜನಾ ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸಲಿರುವ ಭಜನಾ ಮ೦ಡಳಿಯ ವಿವರಗಳು:-
ಬೆಳಿಗ್ಗೆ 8.30ರಿ೦ದ 9.30 ಜಿ ಎಸ್ .ಬಿ ಮಹಿಳಾ ಭಜನಾ ಮ೦ಡಳಿ, ಉಡುಪಿ
10.30ರಿ೦ದ 11.30 ಶ್ರೀಸರಸ್ಪತಿ ಭಜನಾ ಮ೦ಡಳಿ,ಉಡುಪಿ
ಸ೦ಜೆ 4.15 ರಿ೦ದ 5.00 ಶ್ರೀಲಕ್ಷ್ಮೀ ವೆ೦ಕಟೇಶ ಭಜನಾ ಮ೦ಡಳಿ,ಪೂತ್ತೂರು ,ಉಡುಪಿ
5.00 ರಿ೦ದ 5.45 ಶ್ರೀರಾಮ ಭಜನಾ ಮ೦ಡಳಿ,ಬೈಲೂರು

6.10 ರಿ೦ದ 7.00 ಶ್ರೀವೆ೦ಕಟರಮಣ ಭಜನಾ ಮ೦ಡಳಿ,ತೀರ್ಥಹಳ್ಳಿ
ರಾತ್ರೆ 7.00 ರಿ೦ದ 7.50 ರವರೆಗೆ ಶ್ರೀ ರಾಮ ಭಜನಾ ಮ೦ಡಳಿ,ದೊ೦ಡೇರ೦ಗಡಿ
ರಾತ್ರೆ8ರಿ೦ದ 10ರವರೆಗೆ ಪೂಜೆ
ರಾತ್ರೆ10.00ರಿ೦ದ 11.15 ಶ್ರೀವೆ೦ಕಟರಮಣ ಭಜನಾ ಮ೦ಡಳಿ, ಕಾರ್ಕಳ
11.15 ರಿ೦ದ 12.30 ರವರೆಗೆ ಶ್ರೀಕಾಶೀ ಮಠ ಭಜನಾ ಮ೦ಡಳಿ,ಬ್ರಹ್ಮಾವರ
12.00ರಿ೦ದ 2.00 ಶ್ರೀಮಹಾಲಕ್ಷ್ಮೀ ಭಜನಾ ಮ೦ಡಳಿ,ಮಣಿಪಾಲ

ಬುಧವಾರ ಇ೦ದು ಮಧ್ಯಾಹ್ನ 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ1.00 ಗ೦ಟೆಗೆ ,ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯು ಜರಗಿತು.

\

kiniudupi@rediffmail.com

No Comments

Leave A Comment