ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಕಾಳಿ ನದಿ ಹಳೆ ಸೇತುವೆ ಕುಸಿತ; ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧ
ಕಾರವಾರ, ಆಗಸ್ಟ್.07: ಕಾರವಾರದ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ ಕುಸಿದು (Bridge Collapse) ಬಿದ್ದಿದೆ. ಈ ಹಿನ್ನೆಲೆ ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಕಾರವಾರ ಹಾಗೂ ಗೋವಾಗೆ ಸಂಪರ್ಕ ಕಲ್ಪಿಸುವಂತೆ ಕಾಳಿ ನದಿಗೆ 41 ವರ್ಷದ ಹಿಂದೆ ಸೇತುವೆ ಕಟ್ಟಲಾಗಿತ್ತು. ಈ ಸೇತುವೆ ಹಳೆಯದಾದ ಹಿನ್ನೆಲೆ ಪಕ್ಕದಲ್ಲೇ ಮತ್ತೊಂದು ಹೊಸ ಸೇತುವೆ ಕಟ್ಟಲಾಗಿದೆ. ಇದೀಗ ಹಳೆ ಸೇತುವೆ ಕುಸಿದಿದ್ದು ಹೊಸ ಸೇತುವೆ ಮೇಲೂ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಪೊಲೀಸ್ ಇಲಾಖೆ ಹೊಸ ಸೇತುವೆ ಮೇಲೆ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕೊಡ್ತಿದ್ದಾರೆ. ಭಾರೀ ವಾಹನಗಳ ಸಂಚಾರ ನಿಷೇಧ ಹಿನ್ನಲೆ ಅಂಕೋಲಾದ ಹಟ್ಟಿಕೇರಿ ಟೋಲ್‌ಗೇಟ್ ಬಳಿ ಸರಕು ವಾಹನಗಳಿಗೆ ತಡೆ ಹಿಡಿಯಲಾಗುತ್ತಿದೆ. ವಾಹನ ದಟ್ಟಣೆ ಉಂಟಾಗದಂತೆ ಸರಕು ವಾಹನಗಳನ್ನ ತಡೆದು ನಿಲ್ಲಿಸಲಾಗುತ್ತಿದೆ. ಗೋವಾ ಮಾರ್ಗಕ್ಕೆ ತೆರಳುವ ಭಾರೀ ವಾಹನಗಳಿಗೆ ಟೋಲ್‌ನಲ್ಲೇ ತಡೆದು ಪೊಲೀಸರು ನಿಲ್ಲಿಸುತ್ತಿದ್ದಾರೆ. ಭಾರೀ ವಾಹನ ಸಂಚಾರ ಆರಂಭವಾಗುವವರೆಗೆ ಸರಕು ವಾಹನಗಳಿಗೆ ತಡೆ ಹಿಡಿಯಲಾಗಿದೆ
41 ವರ್ಷದ ಹಳೆಯ ಸೇತುವೆ ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಸಿದುಬಿದ್ದಿದೆ. NHAI ಹಾಗೂ IRB ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದೊಡ್ಡ ದುರಂತವೇ ನಡೆದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣದ ವೇಳೆ ಒಂದೇ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದ್ರೆ ಇನ್ನೊಂದು ಮಾರ್ಗಕ್ಕೆ ಹೊಸ ಸೇತುವೆ ನಿರ್ಮಾಣ ಮಾಡದೇ, ಇರುವ ಹಳೆ ಸೇತುವೆಯನ್ನೆ ಬಳಸಲಾಗ್ತಿತ್ತು. ಹೀಗಾಗಿ ಇಂತಹದೊಂದು ಅನಾಹುತ ನಡೆದು ಹೋಗಿದೆ.
ಸೇತುವೆ ಕುಸಿತದಲ್ಲಿ ತಮಿಳುನಾಡು ಮೂಲಕ ಲಾರಿ ಚಾಲಕ ಬಚಾವ್ ಆಗಿದ್ದೇ ಪವಾಡ. ಗೋವಾದಿಂದ ಹುಬ್ಬಳ್ಳಿ ಕಡೆಗೆ ಬಾಲಮುರುಗನ್ ಪೋಸಾಮಿ ಬರುತ್ತಿದ್ದರು. ಲಾರಿ ಸೇತುವೆ ಮೇಲೆ ಯಾವಾಗ ಬಂತೋ ಒಮ್ಮೆಲೇ ಕುಸಿದು ಬಿದ್ದಿದೆ. ಆಗ ಚಾಲಕ ಲಾರಿ ಸಮೇತ ಕಾಳಿ ನದಿಗೆ ಬಿದ್ದಿದ್ದಾರೆ. ಹೇಗೋ ಮುಂಭಾಗದ ಗಾಜು ಒಡೆದು, ಕ್ಯಾಬಿನ್ ಮೇಲೆ ನಿಂತುಕೊಂಡು ಕೂಗಿಕೊಂಡಿದ್ದಾರೆ. ಕೂಡಲೇ ಅಲ್ಲಿದ್ದ ಬೀಟ್ ಪೊಲೀಸರು ಹಾಗೂ ಮೀನುಗಾರರು ಆತನನ್ನ ರಕ್ಷಣೆ ಮಾಡಿದ್ರು.