ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
Olympics 2024: ವಿಶ್ವದ ನಂಬರ್ 1 ಕುಸ್ತಿಪಟು ಮಣ್ಣುಮುಕ್ಕಿಸಿದ ವಿನೇಶ್ ಪೋಗಟ್; ಫೈನಲ್ ತಲುಪಿದ ನೀರಜ್ ಚೋಪ್ರಾ!
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತೀಯ ಆಟಗಾರರು ಪದಕದ ಭರವಸೆ ಮೂಡಿಸಿದ್ದಾರೆ. ಹೌದು ಕುಸ್ತಿಯಲ್ಲಿ ವಿನೇಶ್ ಪೋಗಟ್ ಹಾಗೂ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಹರಿಯಾಣದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗೆದ್ದಿದ್ದಾರೆ. ವಿನೇಶ್ ಜಪಾನ್‌ನ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸಿ 50 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ವಿನೇಶ್ ಫೋಗಟ್ ಕಳೆದ ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಮತ್ತು ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ಅವರನ್ನು 16ರ ಸುತ್ತಿನಲ್ಲಿ 3-2 ರಿಂದ ಸೋಲಿಸಿದ್ದಾರೆ.
ವಿನೇಶ್ ಕೊನೆಯ 5 ಸೆಕೆಂಡುಗಳವರೆಗೆ 0-2 ರಿಂದ ಹಿಂದುಳಿದಿದ್ದರು. ಆದರೆ ಕೊನೆಯಲ್ಲಿ ಮೂರು ಅಂಕಗಳನ್ನು ಪಡೆಯುವ ಮೂಲಕ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಅನ್ನು ಸೋಲಿಸಿದರು. ಜಂತರ್ ಮಂತರ್ ನಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ದೌರ್ಜನ್ಯದ ವಿರುದ್ಧ ಸುದೀರ್ಘ ಕಾಲ ಹೋರಾಟ ನಡೆಸಿದ್ದ ವಿನೇಶ್ ಗೆ ಒಲಿಂಪಿಕ್ಸ್ ಆಡುವುದೂ ದೊಡ್ಡ ವಿಷಯವಾಗಿದೆ.
ಫೈನಲ್ ಪ್ರವೇಶಿಸಿದ ನೀರಜ್ ಚೋಪ್ರಾ
ಪ್ಯಾರಿಸ್ ಒಲಿಂಪಿಕ್ಸ್‌ನ 11ನೇ ದಿನ, ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದರು. ನೀರಜ್ ಇಂದು ನಡೆದ ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಎಸೆತವನ್ನು 89.34 ಮೀಟರ್‌ಗಳಿಗೆ ಎಸೆದರು. ಇದು ನೀರಜ್ ಅವರ ಈ ಋತುವಿನ ಅತ್ಯುತ್ತಮ ಎಸೆತವಾಗಿದೆ. ನೀರಜ್ ಅವರ ಎದುರಾಳಿಗಳಾದ ಗ್ರೆನಡಾದ ಆಂಡರ್ಸನ್ ಪೀಟರ್ಸ್ 88.63 ಮೀಟರ್ಸ್ ಎಸೆದರೆ ಪಾಕಿಸ್ತಾನದ ಅರ್ಷದ್ ನದೀಮ್ 86.59 ಮೀಟರ್ಸ್ ಎಸೆದು ಫೈನಲ್‌ಗೆ ಅರ್ಹತೆ ಪಡೆದರು.