ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ವಾಲ್ಮೀಕಿ ಹಗರಣ: ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ, ನಾಗೇಂದ್ರ, ದದ್ದಲ್ ಹೆಸರೇ ಇಲ್ಲ
ಬೆಂಗಳೂರು, (ಆಗಸ್ಟ್ 05): ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಇಂದು (ಆಗಸ್ಟ್ 05) ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಒಟ್ಟು 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇನ್ನು ಈ ಚಾರ್ಜ್ಶೀಟ್ನಲ್ಲಿ ಇದೇ ಪ್ರಕರಣದಲ್ಲಿ ಇಡಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ನಾಗೇಂದ್ರ ಹೆಸರು ಇಲ್ಲ. ಹಾಗೇ ಮತ್ತೋರ್ವ ಶಾಸಕ ಬಸನಗೌಡ ದದ್ದಲ್ ಅವರ ಹೆಸರು ಸಹ ಉಲ್ಲೇಖವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಚಾರ್ಜ್ಶೀಟ್ ಅಚ್ಚರಿಗೆ ಕಾರಣವಾಗಿದೆ.
ಚಾರ್ಜ್ಶೀಟ್ನಲ್ಲಿ ಏನೇನು ಇದೆ?
ಈ ಹಿಂದೆ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಒಟ್ಟು ಮೂರು ಸಾವಿರದ ಪುಟಗಳ ಚಾರ್ಜ್ಶೀಟ್ನಲ್ಲಿ ಹಣ, ಚಿನ್ನ, ಕಾರು ಸೇರಿ 50 ಕೋಟಿ ರೂಪಾಯಿ ಜಪ್ತಿ ಮಾಡಿರುವುದಾಗಿ ಎಸ್‌ಐಟಿ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ನಗದು- 16.83 ಕೋಟಿ ರೂಪಾಯಿ ಹಣ, 11 ಕೋಟಿ 70 ಲಕ್ಷ ಮೌಲ್ಯದ 16.252 ಕೆ.ಜಿ ಚಿನ್ನ, 4.51 ಕೋಟಿ ಮೌಲ್ಯದ ಲ್ಯಾಂಬರ್ಗಿನಿ ಉರುಸ್ ಹಾಗೈ, ಮರ್ಸಿಡೀಸ್ ಬೆಂಜ್ ಕಾರು, ತನಿಖಾಧಿಕಾರಿ ಬ್ಯಾಂಕ್ ಖಾತೆಯಿಂದ 3.19 ಕೋಟಿ ರೂ. ಹಣ, 13.72 ಕೋಟಿ ರೂ. ಹಣ ಫ್ರೀಜ್ ಸೇರಿದಂತೆ ಒಟ್ಟು ಒಟ್ಟು 49.96 ಕೋಟಿ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಮೊದಲು ಬಂಧನವಾಗಿರುವ ಆರೋಪಿಗಳ ವಿರುದ್ಧ ಮಾತ್ರ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಸತ್ಯನಾರಾಯಣ ವರ್ಮಾ( ಹೈದರಾಬಾದ್) , ಪದ್ಮನಾಭ (ವ್ಯವಸ್ಥಾಪಕ), ಪರುಶುರಾಮ್ ( ಲೆಕ್ಕಾಧಿಕಾರಿ), ನೆಕ್ಕುಂಟಿ ನಾಗರಾಜ್ (ನಾಗೇಂದ್ರ ಆಪ್ತ), ನಾಗೇಶ್ವರ್ ರಾವ್(ನೆಕ್ಕುಂಟಿ ನಾಗರಾಜ್ ಸಂಬಂಧಿ), ಸತ್ಯನಾರಾಯಣ ಇಟ್ಕಾರಿ ತೇಜಾ (ಫಸ್ಟ್ ಫೈನಾನ್ಸ್ ಅಧ್ಯಕ್ಷ), ಜಗದೀಶ್ (ಉಡುಪಿ), ತೇಜಾ ತಮ್ಮಯ್ಯ(ಬೆಂಗಳೂರು), ಪಿಟ್ಟಲ ಶ್ರೀನಿವಾಸ್ ಗಚ್ಚಿಬೌಲಿ(ಆಂಧ್ರ ಪ್ರದೇಶ), ಸಾಯಿತೇಜ(ಹೈದರಾಬಾದ್) ಸೇರಿ ಒಟ್ಟು 12 ಆರೋಪಿಗಳ ಹೆಸರು ಉಲ್ಲೇಖವಾಗಿದೆ. ಆದ್ರೆ, ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಅವರ ಹೆಸರಿಲ್ಲದಿರುವುದೇ ಸಂಚಲನ ಮೂಡಿಸಿದೆ.
ಇನ್ನು ಇದೇ ಪ್ರಕರಣದಲ್ಲಿ ಇಡಿ ಬಂಧನಕ್ಕೊಳಗಾಗಿರುವ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಹೆಸರು ಈ ಚಾರ್ಜ್ಶೀರ್ಟ್ನಲ್ಲಿ ಇಲ್ಲದಿರುವ ಬಗ್ಗೆ ವಿಪಕ್ಷಗಳು ಆಕ್ಷೇಪಿಸುವ ಸಾಧ್ಯತೆಗಳಿದ್ದು, ಇದನ್ನು ಕೋರ್ಟ್ ಸ್ವೀಕಾರ ಮಾಡುತ್ತಾ ಅಥವಾ ಈ ಬಗ್ಗೆ ಏನಾದರೂ ಹೇಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.