Tirupati Laddu: ವಿಶ್ವ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದಕ್ಕೆ 309 ವರ್ಷಗಳ ಸಂಭ್ರಮ, ಇದರ ವಿಶೇಷತೆಗಳೇನು? ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಾತ್ರವಾಗಿದ್ದು ವರ್ಷದಿಂದ ವರ್ಷಕ್ಕೆ ಈ ದೇವಸ್ಥಾನದ ಆದಾಯ ಹೆಚ್ಚಾಗುತ್ತಿದೆ. ಇಲ್ಲಿನ ದೇವರು ಎಷ್ಟು ಪ್ರಸಿದ್ದವೋ ಈ ದೇವಸ್ಥಾನದಲ್ಲಿ ನೀಡುವ ಲಡ್ಡು ಕೂಡ ಅಷ್ಟೇ ಪ್ರಸಿದ್ದ. ಹಾಗಾಗಿ, ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದ ‘ತಿರುಪತಿ ಲಡ್ಡು’ ಪ್ರಸಾದ ನೆನೆದರೆ ಭಕ್ತಿಯ ಜೊತೆಗೆ ಬಾಯಲ್ಲಿ ನೀರು ಬರುತ್ತದೆ. ತುಪ್ಪ ಮತ್ತು ಏಲಕ್ಕಿ ಆಸ್ವಾದ ಹೊಂದಿರುವ ಈ ಲಡ್ಡು ವಿಶ್ವ ಪ್ರಸಿದ್ಧ. ಈಗ ಈ ಪವಿತ್ರ ಪ್ರಸಾದಕ್ಕೆ 309 ವರ್ಷ. ಇದನ್ನು ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ಪ್ರಾರಂಭಿಸಲಾಯಿತು. ನಂಬಿಕೆಗಳ ಪ್ರಕಾರ ಇಲ್ಲಿನ ಪ್ರಸಾದ ಸ್ವೀಕರಿಸದೆ ತಿರುಪತಿ ದೇವಸ್ಥಾನ ಯಾತ್ರೆ ಸಂಪೂರ್ಣವಾಗುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಇಲ್ಲಿಗೆ ಬಂದ ಭಕ್ತರು ಲಡ್ಡು ಪ್ರಸಾದ ಸ್ವೀಕರಿಸದೆಯೇ ಮನೆಗೆ ತೆರಳುವುದಿಲ್ಲ. ಇಲ್ಲಿ ನಡೆಯುವ ಬ್ರಹ್ಮೋತ್ಸವದ ಸಮಯದಲ್ಲಿ ಈ ಲಡ್ಡಿಗೆ ಅಪಾರ ಬೇಡಿಕೆಯಿರುತ್ತದಂತೆ. ಇಲ್ಲಿ ಪ್ರತಿನಿತ್ಯ 270 ಜನ ಬಾಣಸಿಗರು ಸೇರಿದಂತೆ 620 ಜನ ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಾರೆ. Share this:Click to share on Facebook (Opens in new window)Click to share on X (Opens in new window)Click to share on Twitter (Opens in new window)Click to share on Pinterest (Opens in new window)Click to share on Telegram (Opens in new window)Click to share on Threads (Opens in new window)Click to share on WhatsApp (Opens in new window) Related