ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಗ್ರಾಹಕನಿಗೆ ತಿಂಡಿ ಪಾರ್ಸ​​ಲ್ ಬದಲಿಗೆ 50 ಸಾವಿರ ರೂ. ಹಣವಿದ್ದ ಕವರ್ ನೀಡಿದ ಹೋಟೆಲ್ ಮಾಲೀಕ

ಕೊಪ್ಪಳ, ಜುಲೈ 21: ತನ್ನದಲ್ಲದ ಹಣವನ್ನು ಹೋಟೆಲ್​ ಮಾಲಿಕನಿಗೆ ಮರಳಿಸುವ ಮೂಲಕ ​ಕೊಪ್ಪಳ  ಜಿಲ್ಲೆಯ ಕುಷ್ಟಗಿ ಪಟ್ಟಣದ ಶಿಕ್ಷಕ ಮಾದರಿಯಾಗಿದ್ದಾರೆ. ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಅಂತ ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.

ಮುಂಜಾನೆ ಕುಷ್ಟಗಿ ಪಟ್ಟಣದ ನಿವಾಸಿಯಾಗಿರುವ ಸರ್ಕಾರಿ ಶಾಲೆ ಶಿಕ್ಷಕ ಶ್ರೀನಿವಾಸ್ ದೇಸಾಯಿ, ಸೌದಾಗರ್ ಹೋಟೆಲ್​ಗೆ ಬಂದಿದ್ದರು. ತನಗೆ ಇಡ್ಲಿ, ವಡೆ, ದೋಸೆಯನ್ನು ಪಾರ್ಸಲ್ ಕೊಡಿ ಅಂತ ಹೇಳಿದ್ದರು. ಆದರೆ ಸೌದಾಗರ್ ಆಹಾರವಿದ್ದ ಕವರ್ ನೀಡುವ ಬದಲು ಹಣವಿದ್ದ ಕವರ್ ನೀಡಿ, ನಿಮ್ಮ ಪಾರ್ಸಲ್ ತೆಗೆದುಕೊಂಡು ಹೋಗಿ ಅಂತ ಹೇಳಿದ್ದರು. ಹೀಗಾಗಿ ಶ್ರೀನಿವಾಸ ದೇಸಾಯಿ ಅವರು ಕವರ್​​ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು.

ಮನೆಯಲ್ಲಿ ಮಕ್ಕಳ ಜೊತೆ ಉಪಹಾರ ಸೇವಿಸಬೇಕು ಅಂತ ಕವರ್ ಬಿಚ್ಚಿ ನೋಡಿದರೆ ಇಡ್ಲಿ, ವಡೆ, ‌ದೋಸೆ ಬದಲಾಗಿ, ಹಣವಿತ್ತು. ಹೋಟೆಲ್ ಮಾಲೀಕ ಅಚಾತುರ್ಯದಿಂದ ಹಣದ ಕವರ್ ನೀಡಿದ್ದಾನೆ ಅಂತ ತಿಳಿದ ಶಿಕ್ಷಕ ಶ್ರೀನಿವಾಸ್ ದೇಸಾಯಿ ಅವರು ಹೋಟೆಲ್ ಮಾಲೀಕನ ಬಳಿ ಹೋಗಿ ಹಣವಿದ್ದ ಕವರ್​​ ಅನ್ನು ಮರಳಿ ನೀಡಿದ್ದಾರೆ.

ಹಣವನ್ನು ಹಿಂತಿರುಗಿಸಿ ಪ್ರಮಾಣಿಕತೆ ಮೆರದಿದ್ದಾರೆ. ಶಿಕ್ಷಕನ ಪ್ರಮಾಣಿಕತೆಗೆ ಹೋಟೆಲ್ ಮಾಲೀಕ ಧನ್ಯವಾದಗಳನ್ನು ಹೇಳಿ, ನಿಮ್ಮ ಪ್ರಮಾಣಿಕತೆ ಹಲವರಿಗೆ ಮಾದರಿಯಾಗಿದೆ ಅಂತ ಅಭಿನಂದಿಸಿದ್ದಾರೆ.

No Comments

Leave A Comment