ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ತೋಟದಲ್ಲಿ ನಿರ್ಮಿಸಿದ್ದ ಶೆಡ್​ಗೆ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು; ತಾಯಿ-ಮಗಳು ಸಜೀವ ದಹನ, ಇಬ್ಬರಿಗೆ ಗಾಯ

ಬಾಗಲಕೋಟೆ, ಜುಲೈ.16: ಪೆಟ್ರೋಲ್ ಸುರಿದು ತಗಡಿನ ಶೆಡ್​​ಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು ಘಟನೆಯಲ್ಲಿ ತಾಯಿ-ಮಗಳು ಸಜೀವ ದಹನವಾಗಿದ್ದಾರೆ (Death). ಹಾಗೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಾಗಲಕೋಟೆ ಜಿಲ್ಲೆ ಮುಧೋಳ‌ ತಾಲೂಕಿನ ಬೆಳಗಲಿ ಗ್ರಾಮದ ತೋಟದಲ್ಲಿದ್ದ ತಗಡಿನ ಶೆಡ್​​ಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ದುಷ್ಕೃತ್ಯ ಮೆರೆದಿದ್ದಾರೆ. ಬೆಳಗಲಿ ಗ್ರಾಮದ ಜೈಬಾನ್​(55), ಶಬಾನ್​(25) ಎಂಬ ತಾಯಿ-ಮಗಳು ಬೆಂಕಿಯಲ್ಲಿ ಸುಟ್ಟು ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು ದಸ್ತಗಿರಿಸಾಬ್, ಸುಬಾನ್​​ಗೆ ಸುಟ್ಟ ಗಾಯಗಳಾಗಿದ್ದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿದ್ದಿಕ್ಕಿ ಎಂಬ ಯುವಕ ಪೆಟ್ರೋಲ್ ವಾಸನೆ ಬರುತ್ತಿದೆ ಎಂದು ಹೊರ ಬಂದು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು, ಬಾಗಲಕೋಟೆ ಎಸ್​​ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ.

ದಸ್ತಗಿರಿಸಾಬ್ ಪೆಂಡಾರಿ ಅವರ ಸ್ವಂತ ಜಮೀನಿನಲ್ಲಿದ್ದ ಶೆಡ್​ನಲ್ಲಿ ಕಳೆದ ರಾತ್ರಿ ಕುಟುಂಬದ ಒಟ್ಟು ಐವರು ಮಲಗಿದ್ದರು. ಬೆಳಗಿನ ಜಾವ 2.30 ರಿಂದ 3.30 ನಡುವೆ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಅಂದಾಜು 100 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಹಾಗೂ ಎರಡು ಹೆಚ್​ಪಿ ಮೋಟಾರನ್ನು ದುಷ್ಕರ್ಮಿಗಳು ಈ ಕೃತ್ಯಕ್ಕೆ ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶೆಡ್​ಗೆ ಪೆಟ್ರೋಲ್ ಸ್ಪ್ರೆ ಮಾಡಿ, ಬೆಂಕಿ ಹಚ್ಚುವ ಮುನ್ನ ಬಾಗಿಲನ್ನು ಲಾಕ್ ಮಾಡಿದ್ದಾರೆ. ಇಡೀ ಕುಟುಂಬವನ್ನು ನಾಶ ಮಾಡುವ ಉದ್ದೇಶದಿಂದ ಈ ಹೀನ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಭೀಕರ ಅಪಘಾತ.. ಗ್ರಾ.ಪಂ. ಸದಸ್ಯ ಸೇರಿ ಮೂವರು ಬಲಿ

ಬೆಂಗಳೂರಿನ ಚನ್ನಸಂದ್ರ ಸೇತುವೆ ಬಳಿ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ವಿನೋದ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಇನ್ನೂ ಹನುಮನಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಕುಮಾರ್ ಹಾಗೂ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ನಂಜೇಗೌಡ ಕೂಡ ಬಲಿಯಾಗಿದ್ದಾರೆ. ಮೃತರು ಬಸ್ ಖರೀದಿಸಲು ಗೋವಾಗೆ ತೆರಳಲು KIABಗೆ ಹೋಗ್ತಿದ್ದಾಗ ಅಪಘಾತ ಸಂಭವಿಸಿದೆ.

ಗೋವಾಕ್ಕೆ ತೆರಳಲು ಏರ್​​ಪೋರ್ಟ್​​​​​​​ಗೆ ಬರ್ತಿದ್ದಾಗ ಅಪಘಾತ

ಮೃತರು ಕನಕಪುರದಿಂದ ಗೋವಾಕ್ಕೆ ತೆರಳಲು ಕೆಂಪೇಗೌಡ ಏರ್​​ಪೋರ್ಟ್​​​​​​​ಗೆ ಸ್ಕಾರ್ಪಿಯೊ ಕಾರಿನಲ್ಲಿ ತೆರಳುತ್ತಿದ್ದರು. ಪಂಚಾಯಿತಿ ಸದಸ್ಯ ವಿನೋದ್ ಕಾರು ಚಲಾಯಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು, ಪಕ್ಕದ ರಸ್ತೆಗೆ ನುಗ್ಗಿತ್ತು. ಆಗ ಹೊಸೂರಿನತ್ತ ತೆರಳುತ್ತಿದ್ದ XUV 700ಗೆ ಕಾರಿಗೆ ಡಿಕ್ಕಿಯಾಗಿದೆ. ಸ್ಕಾರ್ಪಿಯೊದಲ್ಲಿದ್ದ ಮೂವರು ದುರ್ಮರಣಕ್ಕಿಡಾಗಿದ್ದಾರೆ. XUV 700 ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಎಂದು ಬೆಂಗಳೂರು ಪಶ್ಚಿಮ ಸಂಚಾರಿ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ಮಾಹಿತಿ ನೀಡಿದ್ದಾರೆ.

No Comments

Leave A Comment