Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ವಿರುದ್ಧ ದೂರು ದಾಖಲು

ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮೂವರು ಆಟಗಾರರು ಕಾಣಿಸಿಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ತೌಬಾ ತೌಬಾ ಹಾಡಿಗೆ ಮೈ ಕೈ ನೋವನ್ನು ಪ್ರಸ್ತಾಪಿಸುವಂತೆ ಕಾಣಿಸಿಕೊಂಡಿದ್ದರು. ಆದರೆ ಈ ವೇಳೆ ತೋರಿಸಿದ ಚಲನವಲನವು ವಿಶೇಷಚೇತನರನ್ನು ಅವಮಾನಿಸಿದಂತಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ವಿರುದ್ಧ  ರಾಷ್ಟ್ರೀಯ ಅಂಗವಿಕಲರ ಉದ್ಯೋಗ ಉತ್ತೇಜನ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ದೂರು ದಾಖಲಿಸಿದ್ದಾರೆ.

ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ 10 ಕೋಟಿಗೂ ಹೆಚ್ಚು ಅಂಗವಿಕಲರನ್ನು ಅವಮಾನಿಸಿ ತಮಾಷೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ನವದೆಹಲಿಯ ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಹಾಗೆಯೇ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇನ್‌ಸ್ಟಾಗ್ರಾಮ್ (ಮೆಟಾ ಒಡೆತನ) ವಿರುದ್ಧ ಕೂಡ ದೂರನ್ನು ಸಲ್ಲಿಸಲಾಗಿದೆ. ವಿಕಲಚೇತನರನ್ನು ಅಮಾನಿಸಿದಂತಹ ವಿಡಿಯೋ ಇದ್ದರೂ, ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ನಿರ್ಬಂಧಿಸಲಾಗಿಲ್ಲ. ಹೀಗಾಗಿ ಮೆಟಾ ಕಂಪೆನಿ ವಿರುದ್ಧ ಕೂಡ ದೂರು ನೀಡಿದ್ದೇನೆ ಎಂದು ಅರ್ಮಾನ್ ಅಲಿ ತಿಳಿಸಿದ್ದಾರೆ.

ಯುವಿ, ಹರ್ಭಜನ್, ರೈನಾ ವಿಡಿಯೋದಲ್ಲಿ ಕಾಣಿಸಿಕೊಂಡ ಹಾವಭಾವ

ಹರ್ಭಜನ್ ಸಿಂಗ್ ಅವರು ಸಂಸದರು. ಅವರು ಅಂಗವಿಕಲರ ಪರವಾಗಿ ಧ್ವನಿ ಎತ್ತಬೇಕು. ಆದರೆ ಅವರು ಯಾವ ರೀತಿಯ ವಿಡಿಯೋವನ್ನು ಮಾಡುತ್ತಿದ್ದಾರೆ? ನೋಡಿ… ಭಾರತದಲ್ಲಿ, ವಿಕಲಾಂಗತೆಗಳ ಬಗ್ಗೆ ಅರಿವಿನ ತೀವ್ರ ಕೊರತೆಯಿದೆ. ಯಾವಾಗಲೂ ವಿಕಲಚೇತನರನ್ನು ತಮಾಷೆಯ ಭಾಗವಾಗಿ ಗೇಲಿ ಮಾಡುತ್ತೀರುತ್ತೀರಿ. ಇವೆಲ್ಲವೂ ನಿಲ್ಲಬೇಕೆಂಬುದು ನನ್ನ ಆಶಯ. ಹೀಗಾಗಿ ದೂರು ದಾಖಲಿಸಿದ್ದೇನೆ ಎಂದು ಅರ್ಮಾನ್ ಅಲಿ ಹೇಳಿದ್ದಾರೆ.

No Comments

Leave A Comment