ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 10 ಪ್ರವಾಸಿ ಮಿತ್ರರಿದ್ದು, 10 ಮಂದಿ ನಿಯೋಜನೆಗೆ ಮನವಿ ಮಾಡಲಾಗಿದೆ. ಮಳೆಗಾಲದಲ್ಲಿ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ. ಮಳೆಗಾಲ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಅಗತ್ಯವಿರುತ್ತದೆ. ಹೀಗಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಾಯ ಕೋರಿದ್ದೇವೆಂದು ತಿಳಿಸಿದ್ದಾರೆ.
ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ, ಕೆಲವು ಜಲಪಾತಗಳು ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ವಿಭೂತಿ ಜಲಪಾತ, ಮಾಗೋಡು ಜಲಪಾತ ಮತ್ತು ಸಾಥೋಡಿ ಜಲಪಾತಗಳು ತುಂಬಾ ಅಪಾಯಕಾರಿ ಜಲಪಾತಗಳಾಗಿದ್ದು, ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಪ್ರವಾಸಿಗರನ್ನು ನಿಷೇಧಿಸಿದೆ ಎಂದು ಹೇಳಿದ್ದಾರೆ.
ಹೊನ್ನಾವರದ ಬಂಗಾರ ಕುಸುಮ, ಕಾರವಾರದ ಶಿರವಾಡದ ಜಂಬೆ ಜಲಪಾತ, ಕಾರವಾರದ ಅರ್ಗಾ ಬಳಿಯ ನಾಗರಮುಡಿ ಜಲಪಾತ, ಕಾರವಾರದ ತೋಡೂರಿನ ಗೋಲಾರಿ ಮುಂತಾದ ಜಲಪಾತಗಳಲ್ಲಿ ಅಪಾಯ ಹೆಚ್ಚಾಗಿದೆ. ಜಲಪಾತಗಳಿಗೆ ಮಾತ್ರವಲ್ಲ. ಜಿಲ್ಲೆಯಾದ್ಯಂತ ಸಮುದ್ರಗಳು ಮತ್ತು ನದಿಗಳಿಂದಲೂ ಜನರನ್ನು ದೂರವಿಡಲಾಗಿದೆ. ಸುರಕ್ಷಿತ ಪ್ರವಾಸೋದ್ಯಮವನ್ನು ಖಾತರಿಪಡಿಸುವ ಗುರಿಯನ್ನು ಜಿಲ್ಲಾಡಳಿತ ಮಂಡಳಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.