ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಬೆಳಗಾವಿ, ಜುಲೈ.13: ಇನ್ಸ್ಟಾಗ್ರಾಂನಲ್ಲಿ ರೀಲ್ಸ್ (Instagram Love Story) ಮಾಡುತ್ತ ಹುಟ್ಟಿದ ಪ್ರೀತಿಗೆ ಸ್ವತಃ ಊರನ್ನು, ಅಪ್ಪ-ಅಮ್ಮನನ್ನು ಬಿಟ್ಟು ಮೈಸೂರಿನಿಂದ ಬೆಳಗಾವಿಗೆ ಬಂದು ಮದುವೆಯಾಗಿ ಗರ್ಭಿಣಿಯೂ ಆಗಿದ್ದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ (Death) ಘಟನೆ ನಡೆದಿದೆ. ಸದ್ಯ ನೇಣು ಬಿಗಿದ ಸ್ಥಿತಿಯಲ್ಲಿ ನೆಲದ ಮೇಲೆ ಮಲಗಿರುವಂತೆ ಮಹಿಳೆ ಶವ ಪತ್ತೆಯಾಗಿದ್ದು ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಮತ್ತೊಂದೆಡೆ ಮಹಿಳೆ ಕುಟುಂಬಸ್ಥರು ಗಂಡ ಹಾಗೂ ಆತನ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಮಾಡಿದ್ದು ಹುಡುಕಾಟ ನಡೆಯುತ್ತಿದೆ.

ಬೆಳಗಾವಿ, ಜುಲೈ.13: ಇನ್ಸ್ಟಾಗ್ರಾಂನಲ್ಲಿ ರೀಲ್ಸ್  ಮಾಡುತ್ತ ಹುಟ್ಟಿದ ಪ್ರೀತಿಗೆ ಸ್ವತಃ ಊರನ್ನು, ಅಪ್ಪ-ಅಮ್ಮನನ್ನು ಬಿಟ್ಟು ಮೈಸೂರಿನಿಂದ ಬೆಳಗಾವಿಗೆ ಬಂದು ಮದುವೆಯಾಗಿ ಗರ್ಭಿಣಿಯೂ ಆಗಿದ್ದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸದ್ಯ ನೇಣು ಬಿಗಿದ ಸ್ಥಿತಿಯಲ್ಲಿ ನೆಲದ ಮೇಲೆ ಮಲಗಿರುವಂತೆ ಮಹಿಳೆ ಶವ ಪತ್ತೆಯಾಗಿದ್ದು ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಮತ್ತೊಂದೆಡೆ ಮಹಿಳೆ ಕುಟುಂಬಸ್ಥರು ಗಂಡ ಹಾಗೂ ಆತನ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಮಾಡಿದ್ದು ಹುಡುಕಾಟ ನಡೆಯುತ್ತಿದೆ.

ಮೈಸೂರಿನ ಕುಂಬಾರಕೊಪ್ಪಲಿನ ಮಂಜುಳಾ ಅಲಿಯಾಸ್ ನಯನಾ(23) ಎಂಬ ಯುವತಿಗೂ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ನಿವಾಸಿಯಾಗಿರುವ ಬೋರೇಶ್ ಎಂಬ ಯುವಕನಿಗೂ ಇನ್ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡುವ ಮೂಲಕ ಪರಿಚಯವಾಗಿತ್ತು. ಈ ಪರಿಚಯ ಸ್ನೇಹವಾಗಿ ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ರು. ಹೀಗಾಗಿ ಮಂಜುಳಾ ತನ್ನ ಊರು, ಮನೆ ಎಲ್ಲವನ್ನೂ ಬಿಟ್ಟು ಬೆಳಗಾವಿಗೆ ಬಂದು ಬೋರೇಶ್ ಜೊತೆ ಮದುವೆಯಾಗುತ್ತಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಯುವತಿ ಕುಟುಂಬಸ್ಥರು ಬೆಳಗಾವಿಗೆ ಧಾವಿಸಿ ಮಗಳನ್ನು ಮತ್ತೆ ಮೈಸೂರಿಗೆ ಕರೆದುಕೊಂಡು ಹೋಗುತ್ತಾರೆ.

ಆದರೆ ಮತ್ತೆ ಮಂಜುಳಾ ಮನೆ ಬಿಟ್ಟು ಓಡಿ ಬಂದು ಗಂಡನ ಜೊತೆ ಜೀವನ ಮಾಡುತ್ತಾಳೆ. ಇದರಿಂದ ನೊಂದ ಯುವತಿ ಕುಟುಂಬ ಮದುವೆಯಾಗಿದೆ ಸಂಸಾರ ಮಾಡಿಕೊಂಡು ಖುಷಿಯಾಗಿ ಇರಲಿ ಎಂದು ಮಗಳನ್ನು ಬಿಟ್ಟುಬಿಡುತ್ತಾರೆ. ಒಂದು ವರ್ಷ ಸುಖವಾಗಿದ್ದ ಈ ಸಂಸಾರದಲ್ಲಿ ಇತ್ತೀಚೆಗೆ ಬಿರುಕು ಬಿಟ್ಟಿದೆ. 1 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಮಂಜುಳಾ 3 ತಿಂಗಳ ಗರ್ಭಿಣಿಯಾಗಿದ್ದು ಇದು ಗಂಡನಿಗೆ ಇಷ್ಟವಿರಲಿಲ್ಲ. ಮಂಜುಳಾಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಗಂಡ ಹಾಗೂ ಆತನ ಕುಟುಂಬಸ್ಥರು ಒತ್ತಡ ಹೇರಿದ್ದರು. ಈ ಬಗ್ಗೆ ಮಂಜುಳಾ ತನ್ನ ಚಿಕ್ಕಮ್ಮನ ಬಳಿ ಅಳಲು ತೋಡಿಕೊಂಡಿದ್ದಳು. ಆದರೆ ಈಗ ಮಂಜುಳಾ ಶವವಾಗಿ ಪತ್ತೆಯಾಗಿದ್ದಾಳೆ.

kiniudupi@rediffmail.com

No Comments

Leave A Comment