ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ವಾಲ್ಮೀಕಿ ನಿಗಮದಿಂದ ದೋಚಿದ್ದ ಹಣದಿಂದಲೇ ಬೆಂಜ್‌, ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ಆರೋಪಿ

ಬೆಂಗಳೂರು(ಜು.12): ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಹಣದಲ್ಲಿ ಆರೋಪಿ ಎರಡು ಐಷಾರಾಮಿ ಕಾರು ಖರೀದಿಸಿರುವುದನ್ನು ಎಸ್​ಐಟಿ ಪತ್ತೆ ಮಾಡಿದೆ. ಹೈದರಾಬಾದ್​ ಮೂಲದ ಸತ್ಯನಾರಾಯಣ ಎನ್ನುವಾತ ಈ ಹಗರಣದ ಆರೋಪಿಯಾಗಿದ್ದು, ನಿಗಮದಲ್ಲಿ ದೋಚಿದ್ದ ಹಣದಲ್ಲೇ ಸೆಕೆಂಡ್​ ಹ್ಯಾಂಡ್​ನಲ್ಲಿ ಕೋಟಿ ಕೋಟಿ ರೂ. ಬೆಲೆ ಬಾಳುವ ಲ್ಯಾಂಬೋರ್ಗಿನಿ ಮತ್ತು ಬೆಂಜ್ ಕಾರು ಖರೀಸಿರುವುದನ್ನು ಎಸ್​​ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದು, ಇದೀಗ ಆ ಕಾರುಗಳನ್ನುಮೂಲ ಮಾಲೀಕರಿಗೆ ಹಿಂದಿರುಗಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದೆ.

ಇಷ್ಟೆ ಅಲ್ಲದೇ ಈ ಹಿಂದೆಯೂ ಆರೋಪಿ ಸತ್ಯನಾರಾಯಣ ವರ್ಮಾ ಬಳಿ ಸೆಕೆಂಡ್​ ಹ್ಯಾಂಡ್​ 3.32 ಕೋಟಿ ರು. ಮೌಲ್ಯದ ಲ್ಯಾಂಬೋರ್ಗಿನಿ ಪತ್ತೆಯಾಗಿತ್ತು. ನಿಗಮದಿಂದ ದೋಚಿದ್ದ ಹಣದಲ್ಲಿ ವರ್ಮಾ ಹೈದರಾಬಾದ್ ನಗರದ ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ ಆ ಕಾರನ್ನು ಖರೀದಿಸಿದ್ದ. ಬಳಿಕ ಎಸ್‌ಐಟಿ ಅಧಿಕಾರಿಗಳು ಆ ಶೋರೂಮ್ ಮಾಲೀಕರನ್ನು ಸಂಪರ್ಕಿಸಿ ಕಾರಿನ ಹಣದ ಕುರಿತು ವಿಚಾರಿಸಿದ್ದರು. ಆಗ ಆ ಮಾಲೀಕರು ತಮಗೆ ಕಾರು ಮರಳಿಸಿದರೆ ಹಣ ಹಿಂತಿರುಗಿಸುವುದಾಗಿ ಹೇಳಿದ್ದರು. ಅದರಂತೆ ಶೋರೂಮ್ ಮಾಲೀಕನಿಗೆ ಕಾರು ವಾಪಸ್ ಕೊಟ್ಟು ವರ್ಮಾ ಪಾವತಿಸಿದ್ದ 3.32 ಕೋಟಿ ಹಣವನ್ನು ಎಸ್‌ಐಟಿ ಅಧಿಕಾರಿಗಳಿಗೆ ವಶಕ್ಕೆ ಪಡೆದಿದ್ದರು.

ಹೈದರಾಬಾದ್ ಮೂಲದ ಕಾಕಿ ಶ್ರೀನಿವಾಸ್ ಮಾಲೀಕತ್ವದ ಡಿಜಿಟೆಲ್ ಕಂಪನಿ ಖಾತೆಗೆ 10 ಕೋಟಿ ರೂ. ವರ್ಗಾವಣೆ ಯಾಗಿರುವುದು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ. ಈ ಕಾಕಿ ಶ್ರೀನಿವಾಸ್ ಬೆಂಗಳೂರಿನಲ್ಲಿ ಕಂಪನಿ ಹೊಂದಿದ್ದು, ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದಾನೆ. ಹವಾಲ ದಂಧೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆಯಿದ್ದು, ಎಸ್‌ಐಟಿ ಅಧಿಕಾರಿಗಳು ಆತನ ಪತ್ತೆಗೆ ಕಾರ್ಯಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ ಇಡಿ ಪ್ರವೇಶ

ಇನ್ನು 187 ಕೋಟಿ ರೂಪಾಯಿ ಹಗರಣದ ಪ್ರಕರಣದ ತನಿಖೆಯನ್ನು ಎಸ್​​ಐಟಿ ತನಿಖೆ ನಡೆಸಿದ್ದು, ಈ ವರೆಗೆ ಒಟ್ಟು 11 ಆರೋಪಿಗಳನ್ನು ಬಂಧಿಸಿದೆ. ಇದರ ಮಧ್ಯ ಇದೀಗ ಈ ಪ್ರಕರಣದಲ್ಲಿ ಇಡಿ ಸಹ ಮಧ್ಯ ಪ್ರವೇಶಿಸಿದ್ದು, ಈಗಾಗಲೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ನಿವಾಸಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದೆ. ಅಲ್ಲದೇ ನಾಗೇಂದ್ರನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಮತ್ತೊಂದೆಡೆ ನಿಗಮದ ಅಧ್ಯಕ್ಷ ಬಸನಗೌದ ದದ್ದಲ್​ ಅವರನ್ನು ಎಸ್​​ಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಈ ಹಣ ನಾನಾ ಉದ್ಯಮಿಗಳು, ಬಾರ್​ ಆ್ಯಂಡ್​ ರೆಸ್ಟೊರಂಟ್​ಗೆ ವರ್ಗಾವಣೆಯಾಗಿದೆ ಎನ್ನುವುದು ತಿಳಿದುಬಂದಿದೆ.

kiniudupi@rediffmail.com

No Comments

Leave A Comment