``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ತುರ್ತುಪರಿಸ್ಥಿತಿ ಹೇರಿದ ದಿನ ಜೂ. 25 ಇನ್ಮುಂದೆ ‘ಸಂವಿಧಾನ ಹತ್ಯೆ ದಿನ’: ಶಾ ಘೋಷಣೆ

ಭಾರತದಲ್ಲಿ ತುರ್ತುಪರಿಸ್ಥಿತಿ ಹೇರಿದ ದಿನವಾದ ಜೂನ್ 25ನ್ನು ಇನ್ನು ಮುಂದೆ ‘ಸಂವಿಧಾನ್ ಹತ್ಯಾ ದಿವಸ್’ (ಸಂವಿಧಾನ ಹತ್ಯೆ ದಿನ) ಎಂದು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದ್ದಾರೆ.

1975 ರ ತುರ್ತು ಪರಿಸ್ಥಿತಿಯ ಅಮಾನವೀಯ ನೋವುಗಳನ್ನು ಸಹಿಸಿಕೊಂಡವರೆಲ್ಲರಿಗೆ ಈ ದಿನ ಸ್ಮರಣೀಯ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಅಮಿತ್ ಶಾ ಹೇಳಿದ್ದಾರೆ.

“ಜೂನ್ 25, 1975 ರಂದು, ಅಂದಿನ ಪ್ರಧಾನಿ ಇಂದಿರಾಗಾಂಧಿ, ಸರ್ವಾಧಿಕಾರಿ ಮನಸ್ಥಿತಿಯಿಂದ, ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಆತ್ಮವನ್ನು ಕತ್ತು ಹಿಸುಕಿದರು, ಲಕ್ಷಾಂತರ ಜನರನ್ನು ತಮ್ಮ ತಪ್ಪಿಲ್ಲದೆ ಕಂಬಿ ಎಣಿಸುವಂತೆ ಮಾಡಲಾಯಿತು. ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲಾಯಿತು ಹೀಗಾಗಿ ಭಾರತ ಸರ್ಕಾರವು ಪ್ರತಿ ವರ್ಷ ಜೂನ್ 25 ಅನ್ನು ‘ಸಂವಿಧಾನ್ ಹತ್ಯಾ ದಿವಸ್’ ಎಂದು ಆಚರಿಸಲು ನಿರ್ಧರಿಸಿದೆ” ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

No Comments

Leave A Comment