Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಜು.13ರ೦ದು ಉಡುಪಿಯಲ್ಲಿ “ಕಳರಿಪಯಟ್ಟು “ಪ್ರಾತ್ಯಕ್ಷಿಕೆ

ಉಡುಪಿ: ಶ್ರೀಕೃಷ್ಣ ಸೇವಾ ಬಳಗದ ಆಶ್ರಯದಲ್ಲಿ ದಿನಾಂಕ 13-07-2024ರ ಶನಿವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಪದ್ಮಶ್ರೀ ಪುರಸ್ಕೃತ ಕಳರಿಪಟು, 78 ವಯಸ್ಸಿನ ಗುರು ಶ್ರೀಮತಿ ಮೀನಾಕ್ಷಿ ಅಮ್ಮ ಅವರ ಸಾಧನೆಗಾಗಿ ಗೌರವಾದರ ಸನ್ಮಾನ, ಕಳರಿಪಯಟ್ಟು ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಭಾಷಣ ಕಾರ್ಯಕ್ರಮವು ಅಪರಾಹ್ನ 3.30ರಿಂದ ನಡೆಯಲಿದ್ದು ಜೊತೆಯಲ್ಲಿ ದಿನೇಶನ್ ಕಣ್ಣೂರು ಮತ್ತು ಬಳಗದವರಿಂದ ಕಳರಿಪಯಟ್ಟು ಪ್ರದರ್ಶನ ನಡೆಯಲಿದೆ ಎ೦ದು ಶ್ರೀಕೃಷ್ಣ ಸೇವಾ ಬಳಗದ ಸ೦ಚಾಲಕರಾದ ಪ್ರೋ.ಸದಾಶಿವರಾವ್ ರವರು ಗುರುವಾರದ೦ದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶ್ರೀ ಅದಮಾರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ದಿವ್ಯಾನುಗ್ರಹದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಹಿಸಲಿದ್ದು, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ವಜ್ರದೇಹಿ ಮಠ ಗುರುಪುರ,ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆಯೂರು ಹಾಗೂ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ, ಮಾಣಿಲ ಇವರುಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ.

ಉಡುಪಿಯ ಜನಪ್ರಿಯ ಶಾಸಕರಾದ ಯಶ್ ಪಾಲ್ ಸುವರ್ಣರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಶ್ರೀಕಾಂತ ಶೆಟ್ಟಿ ಕಾರ್ಕಳ ಇವರು “ತೌಳವ ಸಮರ ಪರಂಪರೆ” ಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇನ್ನಾ ರಾಮದಾಸ ಮಡುಮಣ್ಣಾಯರು, ಉದ್ಯಮಿ, ಬೆಂಗಳೂರು ಇವರನ್ನು ಉದ್ಯಮ ಕ್ಷೇತ್ರದಲ್ಲಿಯ ಸಾಧನೆಗಾಗಿ ಸ್ವಾಮೀಜಿಯವರು ಸನ್ಮಾನಿಸಲಿದ್ದಾರೆ.

ಕಳರಿಪಯಟ್ಟು: ಗುರು ದ್ರೋಣಾಚಾರ್ಯರು ಭಗವಾನ್ ಪರಶುರಾಮರಿಂದ ಅಭ್ಯಸಿಸಿ, ನಮ್ಮ ಕರಾವಳಿಯಾದ್ಯಂತ ಶಿಷ್ಯರಿಗೆ ಕಲಿಸಿ, ಪ್ರಚುರಪಡಿಸಿದ ಸಮರಕಲೆ. ಸುಮಾರು 3000 ವರ್ಷಗಳಿಗಿಂತಲೂ ಹಳೆಯ ಇತಿಹಾಸವುಳ್ಳ ಈ ಕಲೆಯಲ್ಲಿ ಪ್ರಾವೀಣ್ಯತೆ ಗಳಿಸಿದ ಯೋಧರ ಪರಾಕ್ರಮಕ್ಕೆ ಬೆಚ್ಚಿದ ಬ್ರಿಟಿಷರು ಇದನ್ನು ಸಂಪೂರ್ಣವಾಗಿ ಬಹಿಷ್ಕರಿಸಿದ್ದರು.

ಈಶಪ್ರಿಯತೀರ್ಥ ಶ್ರೀಪಾದರ ಆಶಯ:- ಕರಾವಳಿಯುದ್ದಗಲಕ್ಕೂ ನೂರಾರು ಭಜನಾಮಂಡಳಿಗಳಿವೆ, ಅಲ್ಲಲ್ಲಿ ವ್ಯಾಯಾಮಶಾಲೆಗಳಿವೆ. ಇವರುಗಳು ಭಗವನ್ನಾಮ ಸಂಕೀರ್ತನೆ, ಶಾರೀರಿಕ ವ್ಯಾಯಾಮದೊಂದಿಗೆ ಕಳರಿಪಯಟ್ಟಿನ ಅಭ್ಯಾಸ ಕ್ರಮವನ್ನು ಅಳವಡಿಸಿಕೊಂಡಲ್ಲಿ, ನಮ್ಮ ಸಮಾಜದ ಯುವಕ ಯುವತಿಯರು ಕ್ಷಾತ್ರ ತೇಜೋವಂತರಾಗಿ ಬೆಳೆದು, ನೈತಿಕ ಪ್ರಜ್ಞೆ, ರಾಷ್ಟ್ರೀಯ ಚಿಂತನೆಗಳೊಂದಿಗೆ ದೇಶಭಕ್ತರ ಸುದೃಢ ಸಮಾಜವನ್ನು ಕಟ್ಟುವಲ್ಲಿ ಕೈಜೋಡಿಸುವವರಿದ್ದಾರೆ ಎ೦ದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸ೦ಚಾಲಕರಾದ ಗೋವಿ೦ದ ರಾಜ್ ,ಪುರುಷೋತ್ತಮ ಅಡ್ವೆ.ನಳಿನಿ ಪ್ರದೀಪ್ ರಾವ್ ಸುಮಿತ್ರ ಕೆರೆಮಠ ಉಪಸ್ಥಿತರಿದ್ದರು. ಗಣೇಶ ಹೆಬ್ಬಾರ್ ಸ್ವಾಗತಿಸಿದರು, ಓಂ ಪ್ರಕಾಶ್ ಭಟ್ ಧನ್ಯವಾದವಿತ್ತರು.

No Comments

Leave A Comment