ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ರಷ್ಯಾದಿಂದ ಅಸ್ಟ್ರೀಯಾಕ್ಕೆ ತೆರಳಿದ ಮೋದಿ- ಹೊಸ ಒಪ್ಪಂದಗಳಿಗೆ ಸಹಿ

ವಿಯೆನ್ನಾ/ ಅಸ್ಟ್ರೀ ಯಾ, ಜು. 10,ಎರಡು ದಿನಗಳ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಟ್ರೀಯಾ ರಾಜಧಾನಿ ವಿಯೆನ್ನಾಗೆ ಮಂ ಗಳವಾರ ತಡರಾತ್ರಿ ಬಂದಿಳಿದರು.

ರಷ್ಯಾ ಪ್ರವಾಸ ಮುಗಿಸಿ ಅವರು ಅಸ್ಟ್ರೀಯಾ ಪ್ರವಾಸ ಕೈಗೊಂಡಿದ್ದಾರೆ. ಅಸ್ಟ್ರೀಯಾದ ಚಾನ್ಸಲರ್ ಕಾರ್ಲ್ ನೇಹ್ಮರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಈ ವೇ ಳೆ ಭಾರಿ ಸಂಖ್ಯೆಯಲ್ಲಿ ಭಾರತೀಯರು ಅಲ್ಲಿ ಹಾಜರಿದ್ದರು.40 ವರ್ಷಗಳ ನಂತರ ಭಾರತದ ಪ್ರಧಾನಿ ಅಸ್ಟ್ರೀಯಾ ಪ್ರವಾಸ ಕೈಗೊಂಡಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಅವರು ಕೊನೆಯ ಬಾರಿ ಭೇ ಟಿ ನೀಡಿದ್ದರು.

ಈ ಎರಡು ದಿನಗಳ ಪ್ರವಾಸದಲ್ಲಿ ಮೋದಿ ಅವರು ಹಲವು ಮಹತ್ವದ ಹೊಸ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ.ಅಲ್ಲದೇ ಮೋದಿ ಅವರು ಬುಧವಾರ ಅಸ್ಟ್ರೀಯಾದಲ್ಲಿನ ಭಾರತ ಮೂಲದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಅಧ್ಯಕ್ಷ ಅಲೆಗ್ಸಾಂ ಡರ್ ವ್ಯಾನ್ ಅವರನ್ನು ಭೇಟಿಯಾಗಲಿದ್ದಾರೆ.

ಕಾರ್ಲ್ ನೇಹ್ಮರ್ ಅವರು ಮೋ ದಿ ಅವರನ್ನು ತಮ್ಮ ಖಾಸಗಿ ಸಮಾರಂಭವೊಂದಕ್ಕೆ ಆಹ್ವಾನಿಸಿದ್ದಾರೆ. ಇದರಲ್ಲಿ ಪ್ರಧಾನಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

No Comments

Leave A Comment