ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಹತ್ಯೆ; ಕೊಲೆಗೈದು ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ದುಷ್ಕರ್ಮಿಗಳು
ಹಾಸನ, ಜು.10: ಹನ್ನೆರಡು ವರ್ಷದ ಬಾಲಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದು ಹೋದ ಘಟನೆ ಹಾಸನ ಹೊರವಲಯದ ಬಸವನಹಳ್ಳಿ ಬಳಿ ನಡೆದಿದೆ. ರೈಲ್ವೆ ಹಳಿ ಬಳಿ ಪೊದೆಯಲ್ಲಿ ಕುಶಾಲ್ ಗೌಡ(12) ಮೃತದೇಹ ಪತ್ತೆಯಾಗಿದೆ. ಚಿಕ್ಕಹೊನ್ನೇನಹಳ್ಳಿಯ ವೆಂಕಟೇಶ್ ಹಾಗೂ ರೂಪಾ ದಂಪತಿಯ ಪುತ್ರನಾಗಿರುವ ಕುಶಾಲ್, ನಿನ್ನೆ (ಜು.09) ಸಂಜೆ ಮಕ್ಕಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ವೇಳೆ ಬಚ್ಚಿಟ್ಟುಕೊಳ್ಳಲು ಹೋಗಿ ಕಾಣೆಯಾಗಿದ್ದನಂತೆ.
ಮಗು ವಾಪಸ್ ಬಾರದ ಹಿನ್ನೆಲೆಯಲ್ಲಿ ಪೋಷಕರು ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ. ಇತ್ತೀಚೆಗೆ ಚಿರತೆ ಕಾಟ ಕೂಡ ಹೆಚ್ಚಾದ ಹಿನ್ನಲೆ ಅದೇ ಹೊತ್ತೊಯ್ದಿರಬಹುದೆಂದು ಪೋಷಕರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸೇರಿಕೊಂಡು ಶೋಧ ನಡೆಸಿದ್ದರು. ಆದರೆ, ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು(ಜು.10) ಮಧ್ಯಾಹ್ನ ಪೊದೆಯೊಂದರಲ್ಲಿ ಕುಶಾಲ್ ಗೌಡ ಮೃತದೇಹ ಪತ್ತೆಯಾಗಿದ್ದು, ರೈಲು ಡಿಕ್ಕಿಯಾಗಿ ಸತ್ತಿದ್ದಾನೆಂದು ಬಿಂಬಿಸಲು ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.